ಮಡಿಕೇರಿ ಜ.28 : ಸೋಮವಾರಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ಅವಘಡಕ್ಕೀಡಾಗಿದೆ. ಹುಣಸೂರು ತಾಲ್ಲೂಕಿನ ಯಶೋಧರಪುರ ಗೇಟ್ ಬಳಿಯ ಹಂಪ್ ನಲ್ಲಿ ಬ್ಲೇಡ್ ತುಂಡಾಗಿ ಹಿಂಬದಿಯ ಚಕ್ರಗಳು ಹೌಸಿಂಗ್ ಸಹಿತ ಕಳಚಿಕೊಂಡ ಘಟನೆ ನಡೆಯಿತು.
ಮೈಸೂರು-ಬಂಟ್ವಾಳ ಹೆದ್ದಾರಿ-275 ರಲ್ಲಿ ಕೆ.ಆರ್.ನಗರ ಡಿಪೋಗೆ ಸೇರಿದ ಬಸ್ ಸೋಮವಾರಪೇಟೆ ಕಡೆಯಿಂದ ಮೈಸೂರಿಗೆ ತೆರಳುತ್ತಿತ್ತು. ವೇಗದಲ್ಲಿದ್ದ ಬಸ್ ಯಶೋಧರಪುರ ಗೇಟ್ ಬಳಿಯ ಹಂಪ್ ನಲ್ಲಿಯೂ ವೇಗ ಕಡಿಮೆ ಮಾಡದ ಕಾರಣ ಅವಘಡಕ್ಕೀಡಾಯಿತು ಎಂದು ಆರೋಪಿಸಲಾಗಿದೆ.
ಬಸ್ ನ ಹಿಂಬದಿಯ ಬ್ಲೇಡ್ ತಂಡಾಗಿ ಹೌಸಿಂಗ್ ಸಹಿತಿ ಚಕ್ರಗಳು ಕಳಚಿ ಬಿದ್ದಿದ್ದು, ಅದೃಷ್ಟವಶಾತ್ ಬಸ್ ನಲ್ಲಿದ್ದ 39 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ ಹಿಂಬದಿಯಲ್ಲಿ ಯಾವುದೇ ವಾಹನಗಳಿಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಬಸ್‌ನ್ನು ಕ್ರೇನ್ ಬಳಸಿ ತೆರವುಗೊಳಿಸಲಾಯಿತು. ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.











