ಮಡಿಕೇರಿ ಜ.31 : ಪೊನ್ನಂಪೇಟೆ ತಾಲ್ಲೂಕು, ನಿಟ್ಟೂರು ಮತ್ತು ಬಾಳಲೆ ಗ್ರಾಮಗಳನ್ನು ಸಂಪರ್ಕಿಸುವ, ರೂ.10 ಕೋಟಿ ವೆಚ್ಚದಲ್ಲಿ ಲಕ್ಷ್ಮಣ ತೀರ್ಥ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಮಲ್ಲೂರು ಸೇತುವೆಯ ಕಾಮಗಾರಿಯನ್ನು ಗ್ರಾಮಸ್ಥರೊಂದಿಗೆ ಶಾಸಕ ಕೆ.ಜಿ.ಬೋಪಯ್ಯ ಪರಿಶೀಲಿಸಿದರು.
ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ, ಸ್ಥಳದಲ್ಲಿದ್ದ ಎಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಇದೇ ಸಂದರ್ಭ ಸೂಚಿಸಿದರು.