ಮಡಿಕೇರಿ ಜ.31 : ನಾರಾಯಣ ಸೂಪರ್ಸ್ಪೆಷಾಲಿಟಿ ಒಡಿಪಿ ಸೆಂಟರ್ ವತಿಯಿಂದ ಫೆ.1 ರಂದು ಕುಶಾಲನಗರದಲ್ಲಿ ಗರ್ಭಿಣಿ ಮತ್ತು ಸ್ತ್ರೀರೋಗ ತಪಾಸಣೆ ನಡೆಯಲಿದೆ.
ಕುಶಾಲನಗರದ ಮೆಡಿಪ್ಲೆಕ್ಸ್ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ಮಧ್ಯಾಹ್ನ 2 ರಿಂದ ಸಂಜೆ 5ರ ವರೆಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರಾದ ಡಾ.ಆರತಿ ಸಂತೋಷ್ ಆರ್, ಪ್ರಸೂತಿಯ ತುರ್ತುಸ್ಥಿತಿಗಳು, ಕಿಬ್ಬೊಟ್ಟೆಯ ಗರ್ಭಕಂಠದ ತೊಂದರೆ, ಬಂಜೆತನ ನಿರ್ವಹಣೆ, ಟ್ಯೂಬೆಕ್ಟಮಿ, ಮೈಯೋಮೆಕ್ಟಮಿ, ಅಪಾಯದ ಗರ್ಭಧಾರಣೆ, ಶಸ್ತ್ರ ಚಿಕಿತ್ಸಾ ಹೆರಿಗೆ, ಹಿಸ್ಟರೋಸ್ಕೋಪಿ, ಗರ್ಭಕಂಠದ ಲ್ಯಾಪರೋಸ್ಕೋಪಿಕ್ ವಿಧಾನದ ಕುರಿತು ತಪಾಸಣೆ ನಡೆಸಲಿದ್ದಾರೆ. ನೋಂದಣಿಗಾಗಿ 8904258788, 9008475258 ಸಂಪರ್ಕಿಸಬಹುದಾಗಿದೆ.