ಮಡಿಕೇರಿ ಜ.31 : ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಫೆ.1 ರಂದು ಜಠರರೋಗ, ಲಿವರ್, ಪಿತ್ತಕೋಶ ಮತ್ತು ಪ್ಯಾಂಕ್ರಿಯಾಟಿಕ್ ಕಾಯಿಲೆಗಳ ತಪಾಸಣೆ ನಡೆಯಲಿದೆ.
ಗ್ಯಾಸ್ಟ್ರೋಎಂಟೆರಾಲಜಿ ಮತ್ತು ಹೆಪಟಾಲಜಿ ತಜ್ಞ ಡಾ. ದೇವರಾಜ ಆರ್. ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರ ವರೆಗೆ ವಿರಾಜಪೇಟೆಯ ಕೂರ್ಗ್ ಡಯಾಗ್ನೋಸ್ಟಿಕ್ ಸೆಂಟರ್ ಹಾಗೂ ಮಧ್ಯಾಹ್ನ 12.30 ರಿಂದ 2ರ ವರೆಗೆ ನಾರಾಯಣ ಮೆಡಿಕಲ್ ಸೆಂಟರ್ (ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟರ್ ಸೈನ್ಸ್) ನಲ್ಲಿ ದೊರೆಯಲಿದ್ದಾರೆ.
ಕರುಳಿನ ಕಾಯಿಲೆಗಳು, ಕಾಮಲೆ, ವಾಂತಿಯಲ್ಲಿ ರಕ್ತ, ಗುದನಾಳದ ರಕ್ತಸ್ರಾವ, ಎದೆಯುರಿ, ಡೆಸ್ಫೇಜಿಯಾ, ಜೀರ್ಣಾಂಗದ ಸಮಸ್ಯೆಗಳು, ಪಿತ್ತಕೋಶ ಮತ್ತು ಪ್ಯಾಂಕ್ರಿಯಾಟಿಕ್ ಅಸ್ವಸ್ಥತೆಗಳ ತಪಾಸಣೆ ನಡೆಸಲಿದ್ದಾರೆ. ನೋಂದಣಿಗಾಗಿ 8904258788, 8197623892, 9008475258, 8904736606 ಸಂಪರ್ಕಿಸಬಹುದಾಗಿದೆ.









