ಮಡಿಕೇರಿ ಜ.31 : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ಜಾನಪದ ಕಲಾವಿದೆ ಮಡಿಕೇರಿಯ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಕಾರ್ಯಕರ್ತೆಯರು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಹಿಲ್ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಭೇಟಿ ನೀಡಿದ ಜಮಾಅತ್ ತಂಡದಲ್ಲಿ ಜಿಲ್ಲಾ ಸಂಚಾಲಕಿ ವಹೀದಾ ಷೌಕತ್, ಸದಸ್ಯೆಯರುಗಳಾದ ಝೈನಬಾ ರೆಹ್ಮಾನ್, ಮುಹೀನಾ ಮುಹಮ್ಮದ್ ಮತ್ತು ಮಫೀದಾ ಇದ್ದರು. ಜಿಲ್ಲಾ ಸಂಚಾಲಕ ಪಿ.ಕೆ.ಅಬ್ದುಲ್ ರೆಹೆಮಾನ್, ಕಾರ್ಯದರ್ಶಿ ಮುಹಮ್ಮದ್ ಮುಸ್ತಫಾ ಹಾಗೂ ಅಬ್ದುಲ್ಲಾ ಹಾಜರಿದ್ದರು.









