ಮಡಿಕೇರಿ ಫೆ.2 : ರೊಬೆಸ್ಟಾ ಎಡ್ವೆಂಚರಸ್ ಆಂಡ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಫೆ.5 ರಂದು ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನಲ್ಲಿ ರಾಷ್ಟ್ರಮಟ್ಟದ 4X4 ಆಫ್ ರೋಡ್ ರ‍್ಯಾಲಿ ನಡೆಯಲಿದೆ ಎಂದು ಆಯೋಜಕರಾದ ಉದ್ದಪ್ಪಂಡ ತಿಮ್ಮಣ್ಣ ತಿಳಿಸಿದ್ದಾರೆ.
ಕ್ಯಾಂಪ್ ಎಟ್ ಬೆಟ್ಟತ್ತೂರಿನಲ್ಲಿ (ಜಿಪಿಎಸ್ ಲೊಕೇಶನ್ : ತ್ರಿ ಹಿಲ್ಸ್ ರೆಸಾರ್ಟ್) ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರ‍್ಯಾಲಿ ನಡೆಯಲಿದ್ದು, ಹೊರ ರಾಜ್ಯಗಳ ಪ್ರತಿಭಾವಂತ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
ಸ್ಪರ್ಧೆಯಲ್ಲಿ ಸ್ಟಾಕ್ ಪೆಟ್ರೋಲ್, ಸ್ಟಾಕ್ ಡೀಸಲ್ ಮತ್ತು ಪ್ರೂವ್ ಮೊಡಿಫೈಡ್ ವಿಭಾಗಗಳಿದೆ. ಹೆಚ್ಚಿನ ಮಾಹಿತಿಗೆ 9901312776, 9448448399 ಸಂಪರ್ಕಿಸುವಂತೆ ಉದ್ದಪ್ಪಂಡ ತಿಮ್ಮಣ್ಣ ಕೋರಿದ್ದಾರೆ.
















