Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ನಾಪತ್ತೆ ಪ್ರಕರಣದ ನಂತರ ಎಚ್ಚೆತ್ತುಕೊಂಡ ಅರಣ್ಯ ಸಚಿವರು : ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಇಲ್ಲದೆ ಚಾರಣಕ್ಕೆ ಅವಕಾಶ ಇಲ್ಲ*
  • *ಗೌಡ ಜನಾಂಗ ಬಾಂಧವರಿಗಾಗಿ 27ನೇ ವರ್ಷದ ಕ್ರೀಡಾಕೂಟ “ಕುಟುಂಬ 2026” : ಮೇ 1ರಿಂದ ಆರಂಭ*
  • *ನಾಪೋಕ್ಲು ಹಿಂದೂ ಮಲಯಾಳಿ ಸಂಘದಿಂದ ವಿಷು ಹಬ್ಬ ಸಂಭ್ರಮ*
  • *ಮೈತಾಡಿ ಗ್ರಾಮದಲ್ಲಿ ವಿಶ್ವ ಕಲಾ ದಿನ ಆಚರಣೆ*
  • *ಕೆದಮುಳ್ಳೂರಿನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಹರಿಸೇವೆ ಹಾಗೂ 101 ಕೋಲ*
  • *ಏ.18 ಮತ್ತು 19 ರಂದು ಅರೆಭಾಷೆ ಗೌಡ ಕ್ರೀಡಾ ಹಬ್ಬದ ಸಂಭ್ರಮ : ವಿವಿಧ ವಿಭಾಗಗಳಲ್ಲಿ ಫುಟ್ಬಾಲ್-ಮಹಿಳೆಯರ ಹಗ್ಗಜಗ್ಗಾಟ*
  • *ಏ.17 ರಿಂದ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಆರಂಭ*
  • *ಶುಭ ಅಕ್ಷಯ ತೃತೀಯ : ಕುಶಾಲನಗರದ ಜಿ.ಆಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಚಿನ್ನ ಖರೀದಿಗೆ ಶುಭ ಸಮಯ : ಆಕರ್ಷಕ ಕೊಡುಗೆಗಳು ನಿಮಗಾಗಿ*
  • *ಏ.18 ಮತ್ತು 19 ರಂದು ರೋಮನ್ ಕ್ಯಾಥೋಲಿಕ್ ಕ್ರೀಡೋತ್ಸವ : ಸಾಧಕರಿಗೆ ಸನ್ಮಾನ*
  • *ಕೊಡಗು ವಿಶ್ವವಿದ್ಯಾಲಯದಲ್ಲಿ “ಕೊಡವ ಸಂಸ್ಕೃತಿ ಅಧ್ಯಯನ ಪೀಠ”ದ ಸ್ಥಾಪನೆ : ಸಂಶೋಧನೆ ಸಂರಕ್ಷಣೆ-ಸಂವರ್ಧನೆಗೆ ವಿಶೇಷ ಕಾರ್ಯಯೋಜನೆ : ಅಶೋಕ ಸಂಗಪ್ಪ ಆಲೂರ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»ಕೊಡಗು ಪತ್ರಕರ್ತರ ಸಂಘದಿಂದ ಸಂವಾದ : 5 ವರ್ಷಗಳಲ್ಲಿ 2 ಸಾವಿರ ಕೋಟಿ ರೂ. ವಿನಿಯೋಗವಾಗಿದೆ : ಶ್ವೇತ ಪತ್ರ ಬಿಡುಗಡೆಗೂ ಸಿದ್ಧ : ಶಾಸಕ ಕೆ.ಜಿ.ಬೋಪಯ್ಯ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕೊಡಗು ಪತ್ರಕರ್ತರ ಸಂಘದಿಂದ ಸಂವಾದ : 5 ವರ್ಷಗಳಲ್ಲಿ 2 ಸಾವಿರ ಕೋಟಿ ರೂ. ವಿನಿಯೋಗವಾಗಿದೆ : ಶ್ವೇತ ಪತ್ರ ಬಿಡುಗಡೆಗೂ ಸಿದ್ಧ : ಶಾಸಕ ಕೆ.ಜಿ.ಬೋಪಯ್ಯ

ಫೆಬ್ರವರಿ 2, 20234 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಫೆ.2 : ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗಿದ್ದು, ಈ ಬಗ್ಗೆ ಶ್ವೇತ ಪತ್ರ ಬಿಡುಗಡೆಗೂ ಸಿದ್ಧವಿರುವುದಾಗಿ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾಭವನ ಟ್ರಸ್ಟ್ ನ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ‘ಸಂವಾದ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಮ್ಮ ನಾಲ್ಕು ಅವಧಿಯ ಶಾಸಕ ಸ್ಥಾನದ ನಡೆಗಳನ್ನು ಮೆಲುಕು ಹಾಕಿದರು.
ಹೊಗಳಿಕೆ ಮತ್ತು ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುತ್ತಲೆ, ತನ್ನನ್ನು ಆಯ್ಕೆ ಮಾಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ ಎಂದರು.
ಕೊಡಗು ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕೆನ್ನುವ ಏಕಮಾತ್ರ ಉದ್ದೇಶದೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸಕ್ತ ಆರ್ಥಿಕ ಸಾಲಿನಲ್ಲೆ ಕ್ಷೇತ್ರಕ್ಕೆ 5508 ಲಕ್ಷ ರೂ. ಅನುದಾನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ದೊರಕುವಂತೆ ನೋಡಿಕೊಂಡಿರುವುದಾಗಿ ಹೇಳಿದರು.
::: ‘ಕೊಂಗಣ ಹೊಳೆ’ಯಿಂದ ನೀರು :::
ವಿರಾಜಪೇಟೆ ಕ್ಷೇತ್ರದ ಪೊನ್ನಂಪೇಟೆ ವ್ಯಾಪ್ತಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಸಲುವಾಗಿ, ‘ಕೊಂಗಣ ಹೊಳೆ’ಯಿಂದ ನೀರು ಸರಬರಾಜಿನ ಯೋಜನೆ ಕಾರ್ಯಗತಗೊಳಿಸಲು ಉತ್ತಮ ಅವಕಾಶವಿದೆ. ವಿರಾಜಪೇಟೆ ಸೇರಿದಂತೆ ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಬೋರ್‍ವೆಲ್‍ಗಳು ವಿಫಲವಾಗುತ್ತಿರುವುದರಿಂದ ಅವುಗಳನ್ನು ನೀರಿನ ಮೂಲವಾಗಿ ಪರಿಗಣಿಸಲು ಸಾಧ್ಯವಾಗಲಾರದು. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 60:40 ಅನುಪಾದ ಅನುದಾನದಲ್ಲಿ ಪ್ರತಿ ಮನೆಗೆ ನಲ್ಲಿ ನೀರನ್ನು ಕಲ್ಪಿಸಲಾಗುತ್ತದೆಯಾದರು, ಇದರಲ್ಲಿ ಬೋರ್‍ವೆಲ್‍ಗಳನ್ನು ನೀರಿನ ಮೂಲವಾಗಿ ಪರಿಗಣಿಸುವುದು ಜಿಲ್ಲೆಗೆ ಸಂಬಂಧಿಸಿದಂತೆ ಉಚಿತವಲ್ಲವೆಂದು ತಿಳಿಸಲಾಗಿದೆಯೆಂದು ಮಾಹಿತಿ ನೀಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ‘ಮಲ್ಟಿ ವಿಲೆÉೀಜ್ ಯೋಜನೆ’ಯಡಿ ಬರಪ್ಪೊಳೆ, ಕಾವೇರಿ ಮತ್ತು ಕೊಂಗಣ ಹೊಳೆಯನ್ನು ಬಳಸಿ ಗ್ರಾಮೀಣ ಭಾಗಗಳಿಗೆ ನೀರೊದಗಿಸುವ ಚಿಂತನೆ ಇದೆ. ಜಲಜೀವನ್ ಮಿಷನ್ ಮತ್ತು ಮಲ್ಟಿ ವಿಲೇಜ್ ಸ್ಕೀಂಗಳೆರಡರಿಂದ ಕುಡಿಯುವ ನೀರಿನ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಂದು ತಿಳಿಸಿದರಲ್ಲದೆ, ಅಮೃತ್ ಯೋಜನೆ’ಯಡಿ ಕಾವೇರಿ ನದಿ ನೀರನ್ನು ವಿರಾಜಪೇಟೆ ಸುತ್ತಮುತ್ತಲ ವ್ಯಾಪ್ತಿಗೆ ಮತ್ತು ಕುಶಾಲನಗರಕ್ಕೆ ಒದಗಿಸುವ 64 ಕೋಟಿ ರೂ. ವೆಚ್ಚದ ಯೋಜನೆ ಇರುವುದಾಗಿ ತಿಳಿಸಿದರು.
::: ವನ್ಯಜೀವಿಗಳ ಹಾವಳಿಗೆ ಕಾರಣ :::
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾಡಾನೆ ಸೇರಿದಂತೆ ವಿವಿಧ ವನ್ಯ ಜೀವಿಗಳ ಹಾವಳಿಯ ಗಂಭೀರ ಸಮಸ್ಯೆಯತ್ತ ಶಾಸಕರ ಗಮನ ಸೆಳೆದಾಗ ಅವರು, ಎಸಿ ಕೊಠಡಿಗಳಲ್ಲಿ ಕುಳಿತು ಅಧಿಕಾರಿಗಳು ತೆಗೆದುಕೊಳ್ಳ್ಳುವ ನಿಲುವುಗಳಿಂದ ಸಮಸ್ಯೆ ಉಲ್ಬಣಿಸಿದೆ. ವನ್ಯ ಪ್ರಾಣಿಗಳಿಗೆ ಅರಣ್ಯದಲ್ಲಿ ಅಗತ್ಯ ಆಹಾರ ಮತ್ತು ನೀರು ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳದಿರುವುದು ಇದಕ್ಕೆ ಮೂಲ ಕಾರಣ. ಸರ್ಕಾರ ಆದೇಶಗಳನ್ನು ಮಾಡಬಹುದಾದರು, ಅದನ್ನು ಅನುಷ್ಟಾನಗೊಳಿಸುವ ಅಧಿಕಾರಿ ವರ್ಗ ಆ ನಿಟ್ಟಿನಲ್ಲಿ ಕೆಲಸ ಮಾಡದಿದ್ದಲ್ಲಿ ಸಮಸ್ಯೆ ಬಗೆಹರಿಯುವುದಿಲ್ಲವೆಂದು ವಿಷಾದಿಸಿದರು.
ಕಾಡಾನೆ ಹಾವಳಿ ತಡೆಗೆ ಅಲ್ಲಲ್ಲಿ ಸೋಲಾರ್ ಬೆÉೀಲಿಗಳನ್ನು, ಕಂದಕಗಳನ್ನು ನಿರ್ಮಿಸಲಾಗಿದೆಯಾದರು, ಅವುಗಳ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ಜಿಲ್ಲೆಯನ್ನು ಸುತ್ತುವರೆದಿರುವ ನಾಲ್ಕು ವನ್ಯ ಜೀವಿ ಸಂರಕ್ಷಣಾ ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳಿಗೆ ಅಗತ್ಯವಾದ ಆಹಾರ, ನೀರು ಲಭ್ಯವಾಗುತ್ತಿಲ್ಲ. ಈ ಬಗ್ಗೆ ಗಮನ ಹರಿಸದ ಅಧಿಕಾರಿಗಳು ಏಕ ರೂಪದ ತೇಗದ ಕಾಡು ರೂಪಿಸುತ್ತಾರೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭ ಅರಣ್ಯ ಸಚಿವರಾಗಿ ಮಲೆನಾಡು ಭಾಗದ ಜನಪ್ರತಿನಿಧಿಗೆ ಅವಕಾಶ ನೀಡಬೇಕೆಂದು ನಾನು ಸಲಹೆ ನೀಡಿದ್ದೇನೆ. ಕಾಡು ಎನ್ನುವುದು ಏನೆಂದೇ ತಿಳಿಯದವರು ಅರಣ್ಯ ಸಚಿವರಾಗುವುದರಿಂದ ಸಮಸ್ಯೆಗೆ ಪರಿಹಾರ ರೂಪಿಸುವುದು ಕಷ್ಟವೆಂದು ತಿಳಿಸಿದರು.
::: ‘ಐನ್ ಮನೆ’ ಕಲ್ಪನೆ ವಿಫಲ :::
ಕೊಡಗಿನ ಕೊಡವ ಜನಾಂಗದ ಅಭಿವೃದ್ಧಿಗೆ ಈ ಹಿಂದೆ 10 ಕೋಟಿ ಅನುದಾನವನ್ನು ಘೋಷಿಸಲಾಗಿತ್ತು. ಇದರಲ್ಲಿ 4 ಕೋಟಿಯನ್ನು ಕೊಡವ ಸಮಾಜಗಳ ಒಕ್ಕೂಟಕ್ಕೆ ಒದಗಿಸಲಾಯಿತಾದರೆ, ಉಳಿದ ಅನುದಾನವನ್ನು ಕೊಡವ ಸಂಸ್ಕೃತಿಯ ಮೂಲಸೆಲೆಯಾದ ‘ಐನ್ ಮನೆ’ಗಳಿಗೆ ಒದಗಿಸಬೇಕೆಂದು, ಕ್ರಿಡಾ ಚಟುವಟಿಕೆಗಳಿಗೆ ನೀಡಬೇಕೆನ್ನುವ ಸಲಹೆಗಳು ವಿವಿಧೆಡೆಗಳಿಂದ ಬಂದಿದೆ. ಈ ಹಂತದಲ್ಲಿ ‘ಐನ್ ಮನೆ’ ಸಂಸ್ಕೃತಿಯ ಉಳಿವಿಗೆ ನೀಡಬೇಕೆನ್ನುವ ಬಗ್ಗೆ ತಾನು ಸರ್ಕಾರಕ್ಕೆ ಅಧಿಕಾರಿಗಳಿಗೆ ಮನದಟ್ಟು ಮಾಡುವ ಪ್ರಯತ್ನಗಳನ್ನು ಮಾಡಿದ್ದೆನಾದರು, ಐನ್ ಮನೆ ಎನ್ನುವುದನ್ನು ‘ಮನೆ’ ಎನ್ನುವ ಸೀಮಿತ ದೃಷ್ಟಿಯಿಂದ ನೋಡಿದ್ದರಿಂದ ಅನುದಾನ ಹಾಗೆ ಉಳಿದಿದೆಯೆಂದು ಬೇಸರ ವ್ಯಕ್ತಪಡಿಸಿದರು.

::: ಕಾವೇರಿ ಹೂಳೆತ್ತುವುದಕ್ಕೆ ಕ್ರಮ :::
ಭಾಗಮಂಡಲದ ಮೇಲ್ಸೇತುವೆ ಕಾಮಗಾರಿ ವಿಳಂಬಗೊಳ್ಳುತ್ತಿರುವ ಹಿನ್ನೆಲೆ, ಮುಂಗಾರಿನ ಅವಧಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗದಂತೆ ಕಳೆದ ಬಾರಿ ನದಿಯ ಹೂಳೆತ್ತಲಾಗಿತ್ತು. ಇದರಿಂದ ದೊಡ್ಡ ಪ್ರಮಾಣದ ಪ್ರವಾಹ ಪರಿಸ್ಥಿತಿ ಉದ್ಭವವಾಗಲಿಲ್ಲ. ಇದೀಗ ತಲಕಾವೇರಿಯ ಕೆಲ ಭಾಗದಲ್ಲಿ ನದಿ ಹರಿಯುವ ಪ್ರದೇಶದಲ್ಲಿ ಮತ್ತು ಭಾಗಮಂಡಲದಲ್ಲಿ ಕಾವೇರಿಯ ನದಿಯ ಸುಮಾರು 3 ಕಿ.ಮೀ. ವರೆಗೆ ಹೂಳೆತ್ತುವ 99 ಲಕ್ಷ ವೆಚ್ಚದ ಕಾಮಗಾರಿಗೆ ಮಂಜೂರಾತಿ ದೊರಕಿದೆಯೆಂದು ಮಾಹಿತಿ ನೀಡಿದರು.
ಭಾಗಮಂಡಲ ಸಂಗಮ ಕ್ಷೇತ್ರದ ಕನ್ನಿಕೆ ನದಿಯ ಪ್ರವಾಹ ನಿಯಂತ್ರಿಸಲು ತಡೆಗೋಡೆ ನಿರ್ಮಾಣ ಮಾಡಲು ಮತ್ತು ಅಲ್ಲಿನ ಹೋಳೆತ್ತಲು 1.02 ಕೋಟಿ ರೂ. ಕಾಮಗಾರಿ ನಡೆಯಲಿದೆಯೆಂದು ಶಾಸಕ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದರು.
ಮಾದಕ ದ್ರವ್ಯ ಮಾರಾಟಕ್ಕೆ ಕಡಿವಾಣಕ್ಕೆ ಸೂಚನೆ- ಜಿಲ್ಲಾ ವ್ಯಾಪ್ತಿಯಲ್ಲಿ ಗಾಂಜಾ ಸೇರಿದಂತೆ ಮಾದಕದ್ರವ್ಯಗಳ ಮಾರಾಟ ದಂಧೆಗೆ ಕಡಿವಾಣ ಹಾಕಿ, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನೂತನ ಎಸ್‍ಪಿ ಅವರಿಗೆ ಈಗಾಗಲೆ ಅಗತ್ಯ ನಿರ್ದೇಶನ ನೀಡಿರುವುದಾಗಿ ಶಾಸಕರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.
::: ಮತಾಂತರ ತಡೆಗೆ ಕ್ರಮ :::
ಮತಾಂತರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಾನೂನಿನಂತೆ ಮತಾಂತರಕ್ಕೆ ಪ್ರಚೋದನೆ ನೀಡುವುದೆ ಜಾಮೀನು ರಹಿತ ಕೃತ್ಯವಾಗಿದೆ. ಕಾನೂನಿನ ಮೂಲಕ ಇಂತಹ ಘಟನೆಗಳನ್ನು ನಿಗ್ರಹಿಸಬೇಕಾಗಿದೆಯೆಂದು ಅನಿಸಿಕೆ ವ್ಯಕ್ತಪಡಿಸಿದರು.
::: ಮಲ್ಟಿ ಸ್ಪಷಾಲಿಟಿ ಆಗ್ರಹ ಬೇಡ :::
ಜಿಲ್ಲೆಯಲ್ಲಿ ಮಲ್ಟಿ ಸ್ಪಷಾಲಿಟಿ ಆಸ್ಪತ್ರೆಯೇ ಬೇಕೆನ್ನುವ ಆಗ್ರಹ ಬೇಡ. ಮಡಿಕೇರಿಯಲ್ಲಿ ಇರುವ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸಾ ಸೌಲಭ್ಯಗಳು ಇದೆ, ಒಳ್ಳೆಯ ವೈದ್ಯರಿದ್ದಾರೆ. ಮೈಸೂರು ಜಯದೇವದಂತಹ ಆಸ್ಪತ್ರೆಯೇ ಇಲ್ಲ್ಲಿಗೆ ಬೇಕೆಂದರೆ ಕಷ್ಟಸಾಧ್ಯವೆಂದು ತಿಳಿಸಿದ ಶಾಸಕರು, ಅಗತ್ಯ ಚಿಕಿತ್ಸಾ ಸೌಲಭ್ಯ ಇಲ್ಲಿದ್ದರು ರೋಗಿಗಳನ್ನು ಹೊರ ಆಸ್ಪತ್ರೆಗೆ ಕಳುಹಿಸುವ ಕೆಲ ಘಟನೆಗಳು ತನ್ನ ಗಮನಕ್ಕೆ ಬಂದಿದೆ. ಆ ರೀತಿ ಆಗಬಾರದೆಂದು ತಿಳಿಸಿದರು.
::: ಸ್ಪರ್ಧಿಸುವ ದುರಾಸೆ ಇಲ್ಲ :::
ಭಾರತೀಯ ಜನತಾ ಪಾರ್ಟಿ ತನಗೆ ಎಲ್ಲವನ್ನೂ ನೀಡಿದೆ. ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇನೆ. ಪಕ್ಷ ಸ್ಪರ್ಧಿಸು ಅಂದರೆ ಸ್ಪರ್ಧಿಸುತ್ತೇನೆ. ಇತರೆ ಯಾರಿಗೆ ಅವಕಾಶ ಕೊಟ್ಟರು ಅದಕ್ಕೆ ತಾನು ಸಿದ್ಧ. ನಾನೇ ಸ್ಪರ್ಧಿಸಬೇಕೆನ್ನುವ ದುರಾಸೆ ಇಲ್ಲವೆಂದು ಶಾಸಕ ಕೆ.ಜಿ.ಬೋಪಯ್ಯ ಸ್ಪಷ್ಟಪಡಿಸಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟನ್ ಖಜಾಂಚಿ ಕೆ.ತಿಮ್ಮಪ್ಪ ಮಾತನಾಡಿದರು.
ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿ, ಸಂಘದ ಸದಸ್ಯ ರಂಜಿತ್ ಕವಲಪಾರ ನಿರೂಪಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ನಾಪತ್ತೆ ಪ್ರಕರಣದ ನಂತರ ಎಚ್ಚೆತ್ತುಕೊಂಡ ಅರಣ್ಯ ಸಚಿವರು : ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಇಲ್ಲದೆ ಚಾರಣಕ್ಕೆ ಅವಕಾಶ ಇಲ್ಲ*

ಏಪ್ರಿಲ್ 17, 2026

*ಗೌಡ ಜನಾಂಗ ಬಾಂಧವರಿಗಾಗಿ 27ನೇ ವರ್ಷದ ಕ್ರೀಡಾಕೂಟ “ಕುಟುಂಬ 2026” : ಮೇ 1ರಿಂದ ಆರಂಭ*

ಏಪ್ರಿಲ್ 17, 2026

*ನಾಪೋಕ್ಲು ಹಿಂದೂ ಮಲಯಾಳಿ ಸಂಘದಿಂದ ವಿಷು ಹಬ್ಬ ಸಂಭ್ರಮ*

ಏಪ್ರಿಲ್ 16, 2026

*ಗೌಡ ಜನಾಂಗ ಬಾಂಧವರಿಗಾಗಿ 27ನೇ ವರ್ಷದ ಕ್ರೀಡಾಕೂಟ “ಕುಟುಂಬ 2026” : ಮೇ 1ರಿಂದ ಆರಂಭ*

ಏಪ್ರಿಲ್ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಏ.17 : ಕೊಡಗು ಗೌಡ ಯುವ ವೇದಿಕೆಯ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ 27ನೇ ವರ್ಷದ…

*ನಾಪೋಕ್ಲು ಹಿಂದೂ ಮಲಯಾಳಿ ಸಂಘದಿಂದ ವಿಷು ಹಬ್ಬ ಸಂಭ್ರಮ*

ಏಪ್ರಿಲ್ 16, 2026

*ಮೈತಾಡಿ ಗ್ರಾಮದಲ್ಲಿ ವಿಶ್ವ ಕಲಾ ದಿನ ಆಚರಣೆ*

ಏಪ್ರಿಲ್ 16, 2026

*ಕೆದಮುಳ್ಳೂರಿನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಹರಿಸೇವೆ ಹಾಗೂ 101 ಕೋಲ*

ಏಪ್ರಿಲ್ 16, 2026

*ಏ.18 ಮತ್ತು 19 ರಂದು ಅರೆಭಾಷೆ ಗೌಡ ಕ್ರೀಡಾ ಹಬ್ಬದ ಸಂಭ್ರಮ : ವಿವಿಧ ವಿಭಾಗಗಳಲ್ಲಿ ಫುಟ್ಬಾಲ್-ಮಹಿಳೆಯರ ಹಗ್ಗಜಗ್ಗಾಟ*

ಏಪ್ರಿಲ್ 16, 2026

*ಏ.17 ರಿಂದ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಆರಂಭ*

ಏಪ್ರಿಲ್ 16, 2026

*ಶುಭ ಅಕ್ಷಯ ತೃತೀಯ : ಕುಶಾಲನಗರದ ಜಿ.ಆಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಚಿನ್ನ ಖರೀದಿಗೆ ಶುಭ ಸಮಯ : ಆಕರ್ಷಕ ಕೊಡುಗೆಗಳು ನಿಮಗಾಗಿ*

ಏಪ್ರಿಲ್ 16, 2026

*ಏ.18 ಮತ್ತು 19 ರಂದು ರೋಮನ್ ಕ್ಯಾಥೋಲಿಕ್ ಕ್ರೀಡೋತ್ಸವ : ಸಾಧಕರಿಗೆ ಸನ್ಮಾನ*

ಏಪ್ರಿಲ್ 16, 2026

*ಕೊಡಗು ವಿಶ್ವವಿದ್ಯಾಲಯದಲ್ಲಿ “ಕೊಡವ ಸಂಸ್ಕೃತಿ ಅಧ್ಯಯನ ಪೀಠ”ದ ಸ್ಥಾಪನೆ : ಸಂಶೋಧನೆ ಸಂರಕ್ಷಣೆ-ಸಂವರ್ಧನೆಗೆ ವಿಶೇಷ ಕಾರ್ಯಯೋಜನೆ : ಅಶೋಕ ಸಂಗಪ್ಪ ಆಲೂರ*

ಏಪ್ರಿಲ್ 16, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.16 ರಂದು ಗೆಲುವು ಸಾಧಿಸಿದ ತಂಡಗಳು*

ಏಪ್ರಿಲ್ 16, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.