ಸುಂಟಿಕೊಪ್ಪ ಫೆ.2 : ಕರ್ನಾಟಕ ರಕ್ಷಣಾ ವೇದಿಕೆಯ ಸುಂಟಿಕೊಪ್ಪ ಹೋಬಳಿ ಘಟಕ ಅಧ್ಯಕ್ಷರಾದ ನಾಗೇಶ್ ಪೂಜಾರಿ ಹಾಗೂ ಪದಾಧಿಕಾರಿಗಳು ನೂತನ ಠಾಣಾಧಿಕಾರಿ ಶ್ರೀಧರ್ ಅವರಿಗೆ ಮಾಲಾರ್ಪಣೆ ಮಾಡಿ ಸ್ವಾಗತ ಕೋರಿದರು.
ಕರವೇ ಹೋಬಳಿ ಅಧ್ಯಕ್ಷ ನಾಗೇಶ್ ಪೂಜಾರಿ ಮಾತನಾಡಿ, ಸುಂಟಿಕೊಪ್ಪ ಪಟ್ಟಣದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಶನಿವಾರ ಭಾನುವಾರ ದಿನಗಳಲ್ಲಿ ಪ್ರವಾಸಿಗಾರು ಹೆಚ್ಚಿರುವುದರಿಂದ ಸುಂಟಿಕೊಪ್ಪ ವಾಹನ ದಟ್ಟಣೆಯು ಹೆಚ್ಚಾಗಿರುತ್ತದೆ. ಭಾನುವಾರ ಸಂತೆ ದಿನವಾಗಿದು,್ದ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸದೆ. ಹೆದ್ದಾರಿ ಬದಿಯಲ್ಲಿ ವ್ಯಾಪಾರ ನಡೆಸುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿಯಿಂದ ಮಾರುಕಟ್ಟೆ ಸುಂಕ ಹರಾಜು ಪಡೆದೆ ವಸೂಲಿದಾರರು ಈ ರಸ್ತೆ ಬದಿ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು.
ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೆ ವಸತಿಗೃಹಗಳು ಇಲ್ಲದೆ ಬಾಡಿಗೆ ಮನೆಗಳ ಆಶ್ರಯ ಪಡೆದಿದ್ದಾರೆ ಇದರ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಠಾಣಾಧಿಕಾರಿ ಸೂಕ್ತ ಪರಿಹಾರ ಸಿಗುವಂತೆ ಜಿಲ್ಲಾ ವರಿಷ್ಠಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.
ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ ಉಪಾದ್ಯಕ್ಷರಾದ ವಿಶ್ವನಾಥ ಪೂಜಾರಿ, ಮನು ಡಿ.ಎ.ಕಾರ್ಯದರ್ಶಿ ಸಂತೋಷ್(ದಿನು), ಸಹ ಕಾರ್ಯದರ್ಶಿ ಸಿಕ್ಕಂದರ್ ಶರೀಫ್, ಸಂಘಟಣಾ ಕಾರ್ಯದರ್ಶಿ ತೋಮಸ್ ಡಿಸೋಜ, ಗೌರವ ಅಧ್ಯಕ್ಷರಾದ ಗ್ಯಾಬ್ರಿಲ್ ಡಿ.ಸೋಜ, ಸದಸ್ಯರಾದ ನಾರಾಯಣ ಹಮೀದ್, ಮಣಿ, ಹಾಜರಿದ್ದರು.







