ನಾಪೋಕ್ಲು ಫೆ.3 : ಕೊಡವ ಕೌಟುಂಬಿಕ ಹಾಕಿ ಉತ್ಸವ ಐದು ವರ್ಷಗಳ ನಂತರ
ಕೊಡವ ಹಾಕಿ ಅಕಾಡೆಮಿ ಸಹಯೋಗದೊಂದಿಗೆ ನಡೆಯುತ್ತಿದೆ. ಅಪ್ಪಚೆಟ್ಟೋಳಂಡ ಕುಟುಂಬ ಈ ಬಾರಿಯ ಹಾಕಿ ನಮ್ಮೆಯನ್ನು ನಡೆಸುತ್ತಿದ್ದು, ನಾಪೋಕ್ಲುವಿನಲ್ಲಿ ಭರದ ಸಿದ್ಧತೆ ನಡೆದಿದೆ.
ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರ ನೇತೃತ್ವದಲ್ಲಿ ಇಂದು
ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗ್ಯಾಲರಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.
ಈಗಾಗಲೇ ಕೊಡವ ಕೌಟುಂಬಿಕ ಹಾಕಿ ಉತ್ಸವ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. ಗಿನ್ನಿಸ್ ದಾಖಲೆಯಾಗಿ ಕೊಡಗಿನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಕೀರ್ತಿ ತರುವಂತಾಗಬೇಕು ಎಂದು ಮನು ಮುತ್ತಪ್ಪ ಹೇಳಿದರು.
ಗ್ಯಾಲರಿ ನಿರ್ಮಾಣ ದೊಡ್ಡ ಕೆಲಸವಾಗಿದ್ದು, ಎಲ್ಲಾ ಗ್ರಾಮಸ್ಥರು, ಶಾಲೆ ಆಡಳಿತ ಮಂಡಳಿ
ಸಹಕಾರ ನೀಡುವಂತೆ ಮನವಿ ಮಾಡಿದರು.
ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ನಾಪೋಕ್ಲುವಿನ ಪಬ್ಲಿಕ್ ಶಾಲೆಯ
ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ಸೇರಿದಂತೆ ಒಟ್ಟು ಮೂರು ಮೈದಾನಗಳಲ್ಲಿ
ಆಯೋಜಿಸಲಾಗುತ್ತಿದೆ. ಕೊಡವ ಹಾಕಿ ಅಕಾಡೆಮಿಯು ಹಾಕಿ ಉತ್ಸವದ ಧ್ವಜವನ್ನು
ಅಪ್ಪಚಟ್ಟೋಳಂಡ ಕುಟುಂಬಸ್ಥರಿಗೆ ಈಗಾಗಲೆ ಹಸ್ತಾಂತರಿಸಿದ್ದು, ವ್ಯವಸ್ಥಿತ ಪಂದ್ಯಾವಳಿ
ಆಯೋಜನೆಗೆ ಅಗತ್ಯ ಸಿದ್ಧತಾ ಕಾರ್ಯಗಳು ನಡೆಯುತ್ತಿದೆ. ವ್ಯವಸ್ಥಿತ ಗ್ಯಾಲರಿ ನಿರ್ಮಾಣ
ಕಾರ್ಯ ನಾಳೆಯಿಂದ ಆರಂಭಗೊಳ್ಳಲಿದೆ. ಕೊಡವ ಹಾಕಿ ನಮ್ಮೆಯ ಮೂಲಕ ಕೊಡವ
ಕುಟುಂಬಗಳ ಯುವಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಕೀರ್ತಿ ತರುವಂತಾಗಬೇಕು. ಯುವ
ಕ್ರೀಡಾಪಟುಗಳ ಭವಿಷ್ಯ ಉಜ್ವಲವಾಗಬೇಕು ಎಂದರು.
ಈ ಸಂದರ್ಭ ಹಾಕಿ ಅಕಾಡೆಮಿ ಉಪಾಧ್ಯಕ್ಷ ಬಡಕದ ದೀನಾ ಪೂವಯ್ಯ, ನಿರ್ದೇಶಕ
ಕುಲ್ಲೇಟ್ಟೀರ ಅರುಣ್ ಬೇಬ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ,
ಬಿಜೆಪಿ ಸ್ಥಾನಿಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಜೆಡಿಎಸ್ ರಾಜ್ಯ
ಕಾರ್ಯದರ್ಶಿ ಎಂ.ಎ.ಮನ್ಸೂರ್ ಆಲಿ, ಬಾಚಮಂಡ ಲವ ಚಿಣ್ಣಪ್ಪ, ಅರೆಯಡ ರತ್ನಾ ಪೆಮ್ಮಯ್ಯ
ನಾಪೋಕ್ಲು ಕೊಡವ ರಿಕ್ರೆಯೇಷನ್ ಕ್ಲಬ್ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಕಾರ್ಯದರ್ಶಿ
ನಾಯಕಂಡ ದೀಪಕ್ (ದೀಪು), ಶಿವಾಜಿ ಕ್ಲಬ್ ಅಧ್ಯಕ್ಷ ಕೆಲೇಟಿರ ದೀಪು ದೇವಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಕನ್ನಂಬೀರ ಸುಧಿ
ತಿಮ್ಮಯ್ಯ, ಕುಡ್ಯೊಳಂಡ ರಮೇಶ್ ಮುದ್ದಯ್ಯ , ಬಿಜೆಪಿ ಪ್ರಮುಖ ಕೋಡಿರ ಪ್ರಸನ್ನ, ಗ್ರಾ.ಪಂ
ಅಧ್ಯಕ್ಷ ಮುಕ್ಕಾಟೀರ ಸಂಪನ್ ಸುಬ್ಬಯ್ಯ, ನೆಲಜಿ ವಿಎಸ್‌ಎಸ್ ಎನ್ ಅಧ್ಯಕ್ಷ ಮಾಳೆಯಂಡ
ವಿಜು, ನೆಲಜಿ ಫಾರ್ಮರ್ಸ್ ಕ್ಲಬ್ ಅಧ್ಯಕ್ಷ ಮಂಡಿರ ನಂದ, ಕೆಪಿಎಸ್ ಶಾಲೆಯ ಉಪಾಧ್ಯಕ್ಷ
ಕೆ.ಎ.ಹ್ಯಾರಿಸ್, ಪ್ರಭಾರ ಪ್ರಾಂಶುಪಾಲೆ ಡಾ.ಅವನಿಜ ಸೋಮಯ್ಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ
ಬಿದ್ದಾಟಂಡ ಜಿನ್ನು ನಾಣಯ್ಯ, ಬಿಜೆಪಿ ತಾಲೂಕು ಕಾರ್ಯದರ್ಶಿ ಅಮ್ಮಂಡ ಮನು ಮಹೇಶ್,
ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟ್ಟಿರ ಅಜಿತ್ ನಾಣಯ್ಯ, ಭಗವತಿ ದೇವಾಲಯದ
ಕಾರ್ಯದರ್ಶಿ ಜಾಲಿ ಪೂವಪ್ಪ, ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಇದ್ದರು.
ಪೂಜಾ ವಿಧಿವಿಧಾನವನ್ನು ದೇವಾಲಯದ ಅರ್ಚಕರಾದ ದಿವಾಕರ ನೆರವೇರಿಸಿದರು. (ವರದಿ ದುಗ್ಗಳ ಸದಾನಂದ)
Breaking News
- *ಜ.5 ರಂದು ಪತ್ರಕರ್ತರ ಕ್ರಿಕೆಟ್ ಕಲರವ : ಆಟಗಾರರ ಪಟ್ಟಿ ಬಿಡುಗಡೆ*
- *ಮಡಿಕೇರಿಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಸಂವಿಧಾನ ದಿನಾಚರಣೆ : ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ : ಸಿವಿಲ್ ನ್ಯಾಯಾಧೀಶೆ ಶುಭ*
- *ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಗುರುತಿನ ಚೀಟಿ ವಿತರಣೆ : ಜನಸಾಮಾನ್ಯರಿಗೆ ಕಾನೂನು ಅರಿವು ಮತ್ತು ನೆರವು ಕಲ್ಪಿಸಿ : ನ್ಯಾಯಾಧೀಶ ಹೊಸಮನಿ ಪುಂಡಲೀಕ ಸಲಹೆ*
- *ಬಸವನಹಳ್ಳಿ ವಸತಿ ಶಾಲೆಯಲ್ಲಿ ನಾಟಕ ಶಿಬಿರ*
- *ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ*
- *ಚಿರತೆ ಸೆರೆಗೆ ಸೂಚನೆ*
- *ಕರಿಕೆ- ಭಾಗಮಂಡಲ ಹೆದ್ದಾರಿ ಕಾಮಗಾರಿಗೆ ಚಾಲನೆ : ಮೂಲಭೂತ ಸೌಲಭ್ಯ ಒದಗಿಸುವ ಭರವಸೆ ನೀಡಿದ ಶಾಸಕ ಪೊನ್ನಣ್ಣ*
- *ಮೂರ್ನಾಡಿನಲ್ಲಿ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮ*
- *ಪ್ರಧಾನಿಯನ್ನು ಭೇಟಿಯಾದ ಸಿಎಂ, ಡಿಸಿಎಂ : ವಿವಿಧ ಬೇಡಿಕೆಗಳ ಮನವಿ ಸಲ್ಲಿಕೆ*
- *ಅಭಿವೃದ್ದಿಯಲ್ಲಿ ರಾಜಕಾರಣ ಮಾಡಲಾರೆ : ಶಾಸಕ ಎ.ಎಸ್.ಪೊನ್ನಣ್ಣ*