ಬೇಕಾಗುವ ಪದಾರ್ಥಗಳು : ಚಿಕನ್ – ಅರ್ಧ ಕೆಜಿ, ಉಪ್ಪು- ರುಚಿಗೆ ತಕ್ಕಷ್ಟು, ಅರಿಶಿಣ ಪುಡಿ- ಸ್ವಲ್ಪ, ಸೋಯಾ ಸಾಸ್ – ಕಾಲು ಚಮಚ, ವಿನೇಗರ್- 2 ಚಮಚ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಶುಂಠಿ, ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ, ಹಸಿಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು 5-6, ಈರುಳ್ಳಿ- 4-5 (ಉದ್ದಕ್ಕೆ ಹೆಚ್ಚಿದ್ದು), ಅಚ್ಚ ಖಾರದ ಪುಡಿ- 2 ಚಮಚ, ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ.
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಚೆನ್ನಾಗಿ ತೊಳೆದುಕೊಂಡ ಚಿಕನ್ ಪೀಸ್, ಉಪ್ಪು, ವಿನೇಗರ್, ಅರಿಶಿಣದ ಪುಡಿ, ಸೋಯಾ ಸಾಸ್ ನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪಾತ್ರೆಯನ್ನು ಒಲೆಯ ಮೇಲಿಟ್ಟು, ಚಿಕನ್ ಬೇಯಲು ಬಿಡಿ.
ಮತ್ತೊಂದು ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ಸ್ವಲ್ಪ ಹಾಕಿ. ಕಾದ ನಂತರ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಹಾಕಿ 2 ನಿಮಿಷ ಹುರಿದುಕೊಳ್ಳಿ. ಬಳಿಕ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಅಚ್ಚ ಖಾರದ ಪುಡಿ ಹಾಕಿ 2 ನಿಮಿಷ ಕೈಯಾಡಿಸಿ.
ಬಳಿಕ ಚಿಕನ್ ಬೆಂದ ಪಾತ್ರೆಯಲ್ಲಿರುವ ಸೂಪ್ (ನೀರು)ನ್ನು ಇದಕ್ಕೆ ಹಾಕಿ ನೀರು ಆವಿಯಾಗುವವರೆಗೆ ಕೈಯಾಡಿಸಿ. ನಂತರ ಬೆಂದ ಚಿಕನ್ ನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 2-3 ನಿಮಿಷ ಒಲೆಯ ಮೇಲಿಟ್ಟು, ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಸ್ಪೈಸಿ ರೆಡ್ ಚಿಕನ್ ಚಿಲ್ಲಿ ಸವಿಯಲು ಸಿದ್ಧ.