ಮಡಿಕೇರಿ ಅ.15 NEWS DESK : ಕೃಷಿ ಹಾಗೂ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಅಕ್ಟೋಬರ್, 17 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಚಿವರು ಅಕ್ಟೋಬರ್, 17 ರಂದು ಸಂಜೆ 4 ಗಂಟೆಗೆ ಕರ್ಣಂಗೇರಿ ಗ್ರಾಮದಲ್ಲಿ ಸಮಗ್ರ ಕೃಷಿ ಪದ್ದತಿ ಉತ್ಕøಷ್ಟ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಸಂಜೆ 7 ಗಂಟೆಗೆ ತಲಕಾವೇರಿಯಲ್ಲಿ ಜರುಗುವ ತುಲಾ ಸಂಕ್ರಮಣ–ಕಾವೇರಿ ಪವಿತ್ರ ತೀರ್ಥೋದ್ಬವದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಕೆ.ಸಿ.ವಿರೂಪಾಕ್ಷ ಅವರು ತಿಳಿಸಿದ್ದಾರೆ.

















