ಮಡಿಕೇರಿ ಫೆ.4 : ಭತ್ತದ ಚೀಲಗಳನ್ನು ಸಾಗಾಟ ಮಾಡುತ್ತಿದ್ದ ಟಿಲ್ಲರ್ ಮಗುಚಿ ಚಾಲಕ ದುರ್ಮರಣಕ್ಕೀಡಾಗಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬೆಸಗೂರು ಗ್ರಾಮದಲ್ಲಿ ನಡೆದಿದೆ.
ಬೆಸಗೂರು ಗ್ರಾಮದ ನಿವಾಸಿ ಸಣ್ಣಕ್ಕಿ ಎಂಬುವವರೆ ಸಾವನ್ನಪ್ಪಿರುವ ದುರ್ದೈವಿ. ಶನಿವಾರ ಬೆಳಗ್ಗೆ ಭತ್ತದ ಚೀಲಗಳನ್ನು ಟಿಲ್ಲರ್‌ನಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಸಂದರ್ಭ, ನಿಯಂತ್ರಣ ತಪ್ಪಿದ ಟಿಲ್ಲರ್ ಮಗುಚಿಕೊಂಡಿದೆ. ಈ ಸಂದರ್ಭ ಚಾಲಕ ಸಣ್ಣಕ್ಕಿ ವಾಹನದ ಕೆಳ ಭಾಗ ಸಿಲುಕಿಕೊಂಡು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೊನ್ನಂಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.














