ಮಡಿಕೇರಿ ಫೆ.4 : ಮಡಿಕೇರಿ ನಗರಸಭಾ ವ್ಯಾಪ್ತಿಯ 9, 2, 17, 18 ಮತ್ತು 21 ವಾರ್ಡ್‍ಗಳಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಭೂಮಿ ಪೂಜೆ ನೆರವೇರಿಸಿದರು.
ಮಡಿಕೇರಿ ನಗರಸಭಾ ವ್ಯಾಪ್ತಿಯ ವಾರ್ಡ್ ನಂ.09 ರಲ್ಲಿ ಅಂಬೇಡ್ಕರ್ ಬಡಾವಣೆಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ಮಲ್ಲಿಕಾರ್ಜುನ ನಗರದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ಗೆಜ್ಜೆ ಸಂಗಪ್ಪ ಸಮುದಾಯ ಭವನ ಉನ್ನತೀಕರಣ ಕಾಮಗಾರಿ, ಮಲ್ಲಿಕಾರ್ಜುನ ನಗರದಲ್ಲಿ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿ.
ವಾರ್ಡ್ ನಂ.02 ರಲ್ಲಿ 110 ಲಕ್ಷ ರೂ. ವೆಚ್ಚದಲ್ಲಿ ಕಾವೇರಿ ಲೇಔಟ್ ಬಡಾವಣೆಯಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿ, ಕಾನ್ವೆಂಟ್ ಜಂಕ್ಷನ್‍ಗಾಗಿ ಮುತ್ತಪ್ಪ ಟೆಂಪಲ್ ಹೋಗುವ ರಸ್ತೆಯಲ್ಲಿ ಭೂಕುಸಿತ ಉಂಟಾಗಿರುವ ಜಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.17 ರಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಕೂರ್ಗ್ ಇಂಟರ್‍ನ್ಯಾಷನಲ್ ಹೋಟೆಲ್ ಮುಂಭಾಗದ ರಸ್ತೆಯಿಂದ ಪಿಡಬ್ಲ್ಯೂಡಿ ಕಚೇರಿಗಾಗಿ ಮಾದೇಟಿರ ಉಷಾ ಮನೆವರೆಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ವಿನಾಯಕ ರೈಸ್ ಮಿಲ್‍ನಿಂದ ನೂತನ ಪ್ರೈವೇಟ್ ಬಸ್ ಸ್ಟಾಂಡ್‍ವರೆಗೆ ಚರಂಡಿ ನಿರ್ಮಾಣ ಮತ್ತು ಪಿಡಬ್ಲ್ಯೂಡಿ ಕಚೇರಿ ಹಿಂಭಾಗ ಕುನ್ಚಡ್ಕ ದೇವಯ್ಯ ಅವರ ಮನೆ ಹತ್ತಿರ ರಸ್ತೆ ಅಭಿವೃದ್ಧಿ ಕಾಮಗಾರಿ ವಾರ್ಡ್ ನಂ.18 ರಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ವಿನ್ಸೆಂಟ್ ಕಾಂಪೌಂಡ್ ಬಾಬುರವರ ಮನೆ ಹತ್ತಿರ ಮತ್ತು ಅರುಣ್ ಪೋಲಿಸ್ ಮನೆ ಹಿಂಭಾಗ ಮತ್ತು ಕೃಷ್ಣ ಮನೆಯ ಹತ್ತಿರ ರಸ್ತೆ ಅಭಿವೃದ್ಧಿ ಕಾಮಗಾರಿ, ವಿನ್ಸೆಂಟ್ ಕಾಂಪೌಂಡ್ ಬಾಬು ರವರ ಮನೆ ಹತ್ತಿರ ಮುತ್ತಪ್ಪ ಪೂಜಾರಿ ಮನೆಯವರೆಗೆ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿ, ಸಾಯಿ ಹಾಕಿ ಮೈದಾನದ ಮುಂಭಾಗದ ಮುಂದುವರೆದ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿ.
ವಾರ್ಡ್ ನಂ.21 ರಲ್ಲಿ 54.50 ಲಕ್ಷ ರೂ. ವೆಚ್ಚದಲ್ಲಿ ಚಾಮುಂಡೇಶ್ವರಿ ನಗರದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ಚಾಮುಂಡೇಶ್ವರಿ ನಗರದ ದೇವಸ್ಥಾನದ ಬಳಿ ಮುಖ್ಯ ರಸ್ತೆಯಿಂದ ಉನ್ನಿಕೃಷ್ಣ ಮನೆಯವರೆಗೆ, ಸಮುದಾಯಭವನದ ಹತ್ತಿರ ಇರುವ ಕಚ್ಚಾ ರಸ್ತೆ ಮತ್ತು ಇತರೆ ಒಳಭಾಗದ ರಸ್ತೆಗಳಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಹಾಗೂ ಚಾಮುಂಡೇಶ್ವರಿ ನಗರದಲ್ಲಿ ಸಮುದಾಯ ಭವನ ಅಭಿವೃದ್ಧಿ ಕಾಮಗಾರಿ. ಹೀಗೆ ಒಟ್ಟು 459.64 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ಉಪಾಧ್ಯಕ್ಷರಾದ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮೇಶ ಸುಬ್ರಮಣಿ, ಪೌರಾಯುಕ್ತರಾದ ವಿಜಯ್, ನಗರಸಭೆ ಸದಸ್ಯರು, ಇತರರು ಇದ್ದರು.