ಚೆಯ್ಯಂಡಾಣೆ ಫೆ.5 : ಇತಿಹಾಸ ಪ್ರಸಿದ್ಧ ಎಡಪಾಲ ಅಂಡತ್ ಮಾನಿ ದರ್ಗಾ ಶರೀಫ್ ನಲ್ಲಿ ವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಇಂದು ಎಡಪಾಲ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು.ಶಾಫಿ ದ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಮಖಾಂ ಝಿಯಾರತ್ ಹಾಗೂ ದುಆ ನೇತೃತ್ವವನ್ನು ಕೊಡಗು ನಾಇಬ್ ಖಾಝಿ ಅಬ್ದುಲ್ಲ ಫೈಝಿ ವಹಿಸಿದ್ದರು. ಸಿರಾಜುದ್ದೀನ್ ದಾರಿಮಿ ಕಕ್ಕಾಡ್ ಧಾರ್ಮಿಕ ಉಪನ್ಯಾಸ ನೀಡಿದರು.
ಮುದರಿಸ್ ನಿಝರ್ ಫೈಝಿ, ಹಮೀದ್ ದಾರಿಮಿ, ಒಂದನೇ ತಕ್ಕ ಮುಖ್ಯಸ್ಥ ಕುಂಜಾ ಅಹ್ಮದ್ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಫೆ.6 ರಂದು ಸಂಜೆ ಸನ್ಮಾನ ಹಾಗೂ ದುಆ ಮಜ್ಲಿಸ್ ನಡೆಯಲಿದ್ದು, ಸಯ್ಯದ್ ಹಮೀದಲಿ ಶಿಹಾಬ್ ತಂಗಳ್ ಪಾಣಕ್ಕಾಡ್ ನೇತೃತ್ವ ವಹಿಸಲಿದ್ದಾರೆ. ಮುಖ್ಯ ಭಾಷಣವನ್ನು ಅಲ್ ಹಾಜ್ ಕೆ.ಎಂ.ಮೊಯ್ದು ಪೈಝಿ ಮಾಡಲಿದ್ದಾರೆ.
ರಾತ್ರಿ ಶಮೀರ್ ಆಶ್ರಫಿ ಕಾಟ್ಟಾಂಬಳ್ಳಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಫೆ.7 ರಂದು ರಾತ್ರಿ ಉಸ್ತಾದ್ ಬಶೀರ್ ಪೈಝಿ ದೇಶ ಮಂಗಲ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಕೊಡಗು ಜಿಲ್ಲಾ ನಾಇಬ್ ಖಾಝಿ ಅಬ್ದುಲ್ಲ ಪೈಝಿ, ಮುದರಿಸ್ ನಿಝರ್ ಪೈಝಿ ಸೇರಿದಂತೆ ಧಾರ್ಮಿಕ ಪಂಡಿತರು, ಧರ್ಮಗುರುಗಳು, ಸಮಾಜ ಸೇವಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸೋಮವಾರ ಮತ್ತು ಮಂಗಳವಾರ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿದೆ. (ವರದಿ : ಅಶ್ರಫ್)











