ಮಡಿಕೇರಿ ಫೆ.5 : ಸಂತೆ ದಿನವಾದ ಭಾನುವಾರ ಸುಂಟಿಕೊಪ್ಪದಲ್ಲಿ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘದ ವತಿಯಿಂದ ನಡೆದ “ಸಂತೆ ಮೇಳ” ಭರ್ಜರಿ ಯಶಸ್ಸು ಕಂಡಿತು.
ಸಂಜೀವಿನಿ ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂಪರ್ಕ ಸಂಸ್ಥೆ ಗ್ರಾಮೀಣ ಪಂಚಾಯತ್ ಹಾಗೂ ರಾಜ್ ಇಲಾಖೆ ಜಿ.ಪಂ., ತಾ.ಪಂ ಹಾಗೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಸಂಜೀವಿನಿ ಸಂತೆ ಮೇಳವನ್ನು ಕರ್ನಾಟಕ ಬ್ಯಾಂಕ್ ಆವರಣದಲ್ಲಿ ಆಯೋಜಿಸಲಾಗಿತ್ತು.
ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷೆ ಶಿವಮ್ಮ ಸಂತೆ ಮೇಳವನ್ನು ಉದ್ಘಾಟಿಸಿದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಗ್ರಾ.ಪಂ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಪುರುಷರು ಯಾವುದೇ ಹುದ್ದೆಯಲ್ಲಿದ್ದರು, ಎಷ್ಟೇ ಹಣಗಳಿಸಿದ್ದರೂ ಸಂಸಾರವನ್ನು ಮುನ್ನಡೆಸುವುದು ಮಹಿಳೆಯರು. ಇಂದಿನ ಮಹಿಳೆಯರು ವ್ಯವಹಾರಿಕವಾಗಿಯೂ ಮುಂದುವರೆಯಲು ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳು ಕಾರಣವಾಗಿವೆ. ಮಹಿಳೆಯರು ಸರ್ಕಾರದ ಆರ್ಥಿಕ ನೆರವು ಮತ್ತು ಸಾಲ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸಬೇಕೆಂದು ಕರೆ ನೀಡಿದರು.
ಸಂಜೀವಿನಿ ಸಂಘದ ಅಧ್ಯಕ್ಷೆ ಗ್ರೇಸಿ ಡೇವಿಡ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ ಸದಸ್ಯರುಗಳಾದ ಪಿ.ಆರ್.ಸುನಿಲ್ ಕುಮಾರ್, ರಫೀಕ್ ಖಾನ್, ಆಲಿಕುಟ್ಟಿ, ಶಬ್ಬೀರ್, ವಸಂತಿ, ರೇಷ್ಮಾ, ಶಾಂತಿ, ಮಂಜುಳಾ, ಹಸೀನಾ ಸಂಜೀವಿನಿ ಸಂಘದ ಉಪಾಧ್ಯಕ್ಷೆ ರೋಸ್‌ಮೇರಿ ರಾಡ್ರಿಗಸ್, ಸ್ತ್ರೀ ಶಕ್ತಿ , ಸಂಘದ ರಾಜ್ಯ ಒಕ್ಕೂಟದ ಅಧ್ಯಕ್ಷೆ ರಹೆನಾ ಪೈರೋಜ್ ಮತ್ತಿತರರು ಇದ್ದರು.
ಸುಂಟಿಕೊಪ್ಪ ಗ್ರಾ.ಪಂ. ಹಾಗೂ ಹೋಬಳಿಯ ವ್ಯಾಪ್ತಿಯ ಸ್ತ್ರೀ ಶಕ್ತಿ , ಸ್ವಸಹಾಯ ಸಂಘದ ಮಹಿಳಾ ಸದಸ್ಯರುಗಳು ಅಲಂಕಾರ ವಸ್ತುಗಳು, ತಿಂಡಿ ತಿನ್ನಿಸು, ಕೊಬ್ಬರಿ, ಎಣ್ಣೆ, ಬಟ್ಟೆ, ಬಳೆ, ತರಕಾರಿ, ವೈನ್‌ಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಬಂದು ವ್ಯಾಪಾರ ವಹಿವಾಟು ನಡೆಸಿದರು.
ಸುಂಟಿಕೊಪ್ಪದ ಪಂಪ್‌ಹೌಸ್‌ನ ಶಿವಕ್ತಿ ಸ್ವಸಹಾಯ ಸಂಘ, ದೀಪಾನಗರ ಸ್ತ್ರೀ ಶಕ್ತಿ ಸಂಘ, ದೇವಿಕಾ ಸ್ವಸಹಾಯ ಸಂಘ, ಮಧುರಮ್ಮ ಬಡಾವಣೆ ನಿಸರ್ಗ ಸ್ತ್ರೀ ಶಕ್ತಿ ಸಂಘ, ಮಾರುತಿ ನಗರ ಕೊಡಗರಹಳ್ಳಿ ಬೆಳಕು ಸ್ವಸಹಾಯ ಸಂಘ, ಸುಂಟಿಕೊಪ್ಪ ಸೂರ್ಯ ಸ್ತ್ರೀ ಶಕ್ತಿ ಸಂಘ, ಮಧುರಮ್ಮ ಬಡಾವಣೆ ಸುವರ್ಣ ಸ್ತ್ರೀ ಶಕ್ತಿ ಸಂಘ, ಸುಂಟಿಕೊಪ್ಪ 1 ನೇ ವಿಭಾಗದ ಭೂಮಿಕ ಸ್ತ್ರೀ ಶಕ್ತಿ ಗುಂಪು, ಸುಂಟಿಕೊಪ್ಪ ಸಂಜೀವಿನಿ ನಾಕೂರು ಗ್ರಾಮ ಪಂಚಾಯಿತಿ ಒಕ್ಕೂಟದ ಮಹಿಳಾ ಸದಸ್ಯರುಗಳು ಸಂತೆಮೇಳದಲ್ಲಿ ಪಾಲ್ಗೊಂಡಿದ್ದರು.
Breaking News
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*