ವಿರಾಜಪೇಟೆ ಫೆ.7 : ಕೊಡಗಿನ ವ್ಯಕ್ತಿಗಳು ಮದುವೆಗೆಂದು ತೆರಳಿ ಹಿಂದಿರುಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿ ಮೃತಪಟ್ಟ ಏಳು ಮಂದಿಯ ಕುಟುಂಬದ ಸದಸ್ಯರಿಗೆ
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಪರಿಹಾರದ ಚೆಕ್ ವಿತರಿಸಿದರು.
ಶಾಸಕರ ಭವನದಲ್ಲಿ ಕುಟುಂಬದ ಸದಸ್ಯರಿಗೆ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಕೆ.ಜಿ ಬೋಪಯ್ಯ
ಮೃತರ ಕುಟುಂಬ ವರ್ಗಗಳು ಬಡ ಕೂಲಿ ಕಾರ್ಮಿಕರಾಗಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಹಿನ್ನಲೆಯಲ್ಲಿ ಅರ್ಜಿದಾರರ ಕೋರಿಕೆಯ ಮೇರೆಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಮೇಕೂರು-ಹೊಸ್ಕೇರಿ ಗ್ರಾಮದ ನಿವಾಸಿಗಳಾದ ಹೆಚ್.ಎಸ್.ರಾಜೇಶ್, ಎಂ.ಆರ್.ಅನಿಲ್, ದೀಲಿಪ್ (ಪಿಲೀಫ್) ಮತ್ತು ಜಿ.ಎ.ಬಾಬು ಅವರುಗಳ ಕುಟುಂಬಕ್ಕೆ ತಲ ಎರಡು ಲಕ್ಷ ರೂಗಳಂತೆ ಪರಿಹಾರ ವಿತರಿಸಿರುವುದಾಗಿ ತಿಳಿಸಿದರು.
ವಿತರಣೆಗೊಂಡ ಪರಿಹಾರದ ಹಣವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದು ಸದಸ್ಯರಿಗೆ ಹೇಳಿದರು.
ಈ ಸಂದರ್ಭ ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ತಾಲೂಕು ಕಛೇರಿಯ ಪ್ರಧಾನ ಕಾರ್ಯದರ್ಶಿ ಸಹಯಕರಾದ ಸಿ.ಎಂ.ನಿಶಾನ್, ಪುತ್ತಂ ಪ್ರದೀಪ್ ಪಾಲಿಬೆಟ್ಟ, ಮತ್ತು ಕುಟುಂಬದ ಸದಸ್ಯರು ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ
















