ವಿರಾಜಪೇಟೆ ಫೆ.7 : ಕೊಡಗು ಕ್ರೀಡೆಗಳ ತವರೂರು. ಕೆಲವು ವರ್ಷಗಳಿಂದ ಕ್ರೀಡೆಗಳ ಆಯೋಜನೆಯು ನಾನಾ ಕಾರಣಗಳಿಂದ ಕಣ್ಮರೆಯಾಗಿತ್ತು. ಆದರೆ ಪ್ರಸ್ತುತ ಸಾಲೀನಲ್ಲಿ ಕ್ರೀಡೆಗಳ ಗತವೈಭವ ಮರುಕಳಿಸಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ, ತೋಮರ ಗ್ರಾಮದ ದಿ. ಲೇಜೆಂಡ್ಸ್ ತೋರ ಕ್ರೀಡಾ ಸಂಸ್ಥೆಯ ವತಿಯಿಂದ ತೋಮರ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ 3ನೇ ವರ್ಷದ ಹೊನಲು ಬೆಳಕಿನ ಟಿ.ಕೆ.ಪಿ.ಎಲ್ ಪ್ರೋ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮಥ್ರ್ಯವು ಹೆಚ್ಚಾಗುತ್ತದೆ. ಯುವಕರಲ್ಲಿ ಸಂಬಂಧಗಳು ಬೆಸುಗೈದು ಒಗ್ಗಟ್ಟು ಎಂಬುದು ಗಟ್ಟಿಯಾಗುತ್ತದೆ. ಗ್ರಾಮೀಣಾ ಭಾಗ ಕ್ರೀಡಾ ಪಟುಗಳು ದೇಶಿಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟಲ್ಲಿ ಸಾಧನೆಗೈದು ಗ್ರಾಮದ ಹೆಸರು ರಾರಾಜಿಸುವಂತೆ ಮಾಡಿದ್ದಾರೆ. ಕಬ್ಬಡಿ ಗ್ರಾಮೀಣಾ ಭಾಗದ ಕ್ರೀಡೆಯಾಗಿದ್ದು ಇಂದು ದೇಶವ್ಯಾಪಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿ ಉತ್ತಮ ಪ್ರೋತ್ಸಹ ದೊರಕುತ್ತಿದೆ. ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ಮೈದಾನದಲ್ಲಿ ತಮ್ಮ ಕ್ರೀಡಾ ಸ್ಫೂರ್ತಿಯೊಂದಿಗೆ ಕ್ರೀಡೆಯ ಪ್ರದರ್ಶನ ಮಾಡಬೇಕು ಎಂದು ಕ್ರೀಡಾ ಪಟುಗಳಿಗೆ ಕಿವಿ ಮಾತು ಹೇಳಿದರು.
ಜಿ.ಪಂ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಈ ಮೊದಲು ತೋಮರ ಗ್ರಾಮವು ಕುಗ್ರಾಮವಾಗಿತ್ತು. ಆದರೆ ಇಂದು ಅಭಿವೃದ್ಧಿಗೊಂಡು ಮುಂದುವರೆದ ಗ್ರಾಮವಾಗಿದೆ. 2019 ರಲ್ಲಿ ಗ್ರಾಮದಲ್ಲಿ ಸಂಭವಿಸಿದ ದುರ್ಘಟನೆಯಿಂದ ಗ್ರಾಮದ ಚಿತ್ರಣವೇ ಬದಲಾಗಿತ್ತು. ಇಲ್ಲಿ ವಾಸ ಮಾಡುವುದು ಕಷ್ಟ ಎಂಬ ಭಾವನೆ ಇಲ್ಲಿನ ವಾಸಿಗಳಲ್ಲಿತ್ತು ಅದರೇ ಗ್ರಾಮವಾಸಿಗಳು ಎದೆಗುಂದದೆ ದಿಟ್ಟದೆಯ ಜೀವನ ಸಾಗಿಸುತ್ತಿದ್ದಾರೆ. ಯುವಕರು ದುಚ್ಟಗಳಿಗೆ ದಾಸರಾಗದೆ ಕ್ರೀಡೆಗಳಲ್ಲಿ ಆಸಕ್ತಿ ವಹಿಸಿಬೇಕು. ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯ ಪ್ರದರ್ಶನ ನೀಡಿ ಮಾಡಿ ಜಿಲ್ಲೆ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರುವಂತರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಕೆದಮುಳ್ಳೂರು ಗ್ರಾ.ಪಂ ಮಾಜಿ ಸದಸ್ಯರಾದ ಚೋಟು ಬಿದ್ದಪ್ಪ ಮಾತನಾಡಿ, ಕಾರ್ಯಕ್ರಮದ ಮೊದಲಿಗೆ 2019 ರಲ್ಲಿ ದುರ್ಘಟನೆಯಲ್ಲಿ ಮಡಿದ ವ್ಯಕ್ತಿಗಳಿಗೆ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಕ್ರೀಡಾಂಗಣದ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಕೆದಮುಳ್ಳೂರು ಗ್ರಾ.ಪಂ ಅಧ್ಯಕ್ಷರಾದ ನಡಿಕೇರಿಯಂಡ ಶೀಲಾ ಮೇದಪ್ಪ, ಉಪಧ್ಯಕ್ಷರಾದ ಮೀನಾಕ್ಷಿ, ಸದಸ್ಯರಾದ ಕೆ.ಎಂ.ರಾಮಯ್ಯ, ಎಂ.ಎಂ. ಪರಮೇಶ್ವರ, ಜಯಂತಿ ಮತ್ತು ದಾನಿಗಳಾದ ಬೈಮನ ಮಧು ನಾಣಯ್ಯ, ಉಪಸ್ಥಿತರಿದ್ದರು.
ದಿ.ಲೇಜೆಂಡ್ಸ್ ತೋರ ಕ್ರೀಡಾ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕ್ರೀಡಾ ಪಟುಗಳು, ಕ್ರೀಡಾ ತಂಡಗಳ ಮಾಲೀಕರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ