ಮಡಿಕೇರಿ ಫೆ.7 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕೊಡವ ಅಧಿಕೃತ ಲಿಪಿಯ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಸರ್ಕಾರ ತಕ್ಷಣ ಇದನ್ನು ಅಂಗೀಕರಿಸಿ, ಜಿಲ್ಲೆಯ ವಾಣಿಜ್ಯ ಮಳಿಗೆ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಭಾಷೆಯೊಂದಿಗೆ ಬಳಸಲು ಆದೇಶ ನೀಡಬೇಕೆಂದು ಕರ್ನಾಟಕ ಭಾಷಾ ಅಲ್ಪಸಂಖ್ಯಾತರ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರತೀಕ್ ಪೊನ್ನಣ್ಣ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಗಮಂಡಲದ ದೇವಾಯದಲ್ಲಿ ಸಿಕ್ಕ ಶಾಸನ ಕೊಡವ ಲಿಪಿಯಲ್ಲಿರುವ ಮೊದಲ ಶಾಸನವಾಗಿದೆ. ಇದು 1370ರ ಇಸವಿಯದಾಗಿದ್ದು, ಅದರಂತೆ 1887ರಲ್ಲಿ ಡಾ.ಕೊರವಂಡ ಅಪ್ಪಯ್ಯ ಅವರು ಲಿಪಿಯನ್ನು ಬಿಡುಗಡೆ ಮಾಡಿದ್ದಾರೆ ಎಂದರು.
ನಂತರ 1970ರಲ್ಲಿ ಸುಮಾರು 12 ಲಿಪಿಗಳನ್ನು ಸಂಶೋಧನೆ ಮಾಡಿ ಡಾ.ಐ.ಎಂ.ಮುತ್ತಣ್ಣ ಅವರು ಕೊಡವ ಭಾಷೆಗೆ ಸರಳವಾಗಿರುವ ಒಂದು ಲಿಪಿಯನ್ನು ತಂದಿದ್ದಾರೆ. ಅಲ್ಲದೆ ನಂತರ ದಿನಗಳಲ್ಲಿ ಐದು ಲಿಪಿಗಳು ಕೊಡವ ಭಾಷೆಗೆ ಬಂದವು. ಇದೀಗ ಅಧಿಕೃತವಾಗಿ ಯಾವ ಲಿಪಿಯನ್ನು ಬಳಸಬೇಕು ಎಂಬ ಗೊಂದಲಕ್ಕೆ ತೆರೆ ಎಳೆದಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕೊಡವ ಅಧಿಕೃತ ಲಿಪಿಯನ್ನು ಅಂತಿಮಗೊಳಿಸಿದೆ.
2022 ಫೆ.21 ರಲ್ಲಿ ನಡೆದ ಲಿಪಿ ಸಮಿತಿಯ ಸಭೆಯಲ್ಲಿ ಸೆಂಟರ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ ಮೈಸೂರಿನ ಪ್ರತಿನಿಧಿಗಳು, ಇತಿಹಾಸಕಾರ, ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಬೊವ್ವೇರಿಯಂಡ ಉತ್ತಯ್ಯ, ಅಪ್ಪನೆರವಂಡ ಕಿರಣ್ ಸುಬ್ಬಯ್ಯ, ಬಾಚರಣಿಯಂಡ ರಾಣು ಅಪ್ಪಣ್ಣ, ಡಾ.ಸುಭಾಷ್ ನಾಣಯ್ಯ, ಮೂಕೊಂಡ ನಿತಿನ್ ಕುಶಾಲಪ್ಪ, ಬಾಚರಣಿಯಂಡ ಗೌರಮ್ಮ ಮಾದಮ್ಮಯ್ಯ, ಮಾಜಿಮಡ ಜಾನಕಿ ಮಾಚಯ್ಯ, ತೇಲಪಂಡ ಕವನ್ ಕಾರ್ಯಪ್ಪ, ಕುಡಿಯರ ಮುತ್ತಪ್ಪ, ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಅವರು ಪಾಲ್ಗೊಂಡು ಚರ್ಚಿಸಿದ್ದರು. ಹಲವು ಚರ್ಚೆಗಳ ನಂತರ ಡಾ.ಐ.ಎಂ.ಮುತ್ತಣ್ಣ ಅವರ ಲಿಪಿಯನ್ನು ಕೊಡವ ಭಾಷೆಯ ಅಧಿಕೃತ ಲಿಪಿ ಎಂದು ಪರಿಗಣಿಸಿದ್ದಾರೆ. ಆದ್ದರಿಂದ ಸರ್ಕಾರ ಇದನ್ನು ತಕ್ಷಣ ಅಂಗೀಕರಿಸಿ ಕೊಡಗಿನ ವಾಣಿಜ್ಯ ಮಳಿಗೆಯಲ್ಲಿ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಭಾಷೆಯೊಂದಿಗೆ ಬಳಸಲು ಆದೇಶ ನೀಡಬೇಕೆಂದು ಪ್ರತೀಕ್ ಪೊನ್ನಣ್ಣ ಒತ್ತಾಯಿಸಿದರು.
Breaking News
- *ಜ.5 ರಂದು ಪತ್ರಕರ್ತರ ಕ್ರಿಕೆಟ್ ಕಲರವ : ಆಟಗಾರರ ಪಟ್ಟಿ ಬಿಡುಗಡೆ*
- *ಮಡಿಕೇರಿಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಸಂವಿಧಾನ ದಿನಾಚರಣೆ : ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ : ಸಿವಿಲ್ ನ್ಯಾಯಾಧೀಶೆ ಶುಭ*
- *ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಗುರುತಿನ ಚೀಟಿ ವಿತರಣೆ : ಜನಸಾಮಾನ್ಯರಿಗೆ ಕಾನೂನು ಅರಿವು ಮತ್ತು ನೆರವು ಕಲ್ಪಿಸಿ : ನ್ಯಾಯಾಧೀಶ ಹೊಸಮನಿ ಪುಂಡಲೀಕ ಸಲಹೆ*
- *ಬಸವನಹಳ್ಳಿ ವಸತಿ ಶಾಲೆಯಲ್ಲಿ ನಾಟಕ ಶಿಬಿರ*
- *ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ*
- *ಚಿರತೆ ಸೆರೆಗೆ ಸೂಚನೆ*
- *ಕರಿಕೆ- ಭಾಗಮಂಡಲ ಹೆದ್ದಾರಿ ಕಾಮಗಾರಿಗೆ ಚಾಲನೆ : ಮೂಲಭೂತ ಸೌಲಭ್ಯ ಒದಗಿಸುವ ಭರವಸೆ ನೀಡಿದ ಶಾಸಕ ಪೊನ್ನಣ್ಣ*
- *ಮೂರ್ನಾಡಿನಲ್ಲಿ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮ*
- *ಪ್ರಧಾನಿಯನ್ನು ಭೇಟಿಯಾದ ಸಿಎಂ, ಡಿಸಿಎಂ : ವಿವಿಧ ಬೇಡಿಕೆಗಳ ಮನವಿ ಸಲ್ಲಿಕೆ*
- *ಅಭಿವೃದ್ದಿಯಲ್ಲಿ ರಾಜಕಾರಣ ಮಾಡಲಾರೆ : ಶಾಸಕ ಎ.ಎಸ್.ಪೊನ್ನಣ್ಣ*