Advertisement
9:16 AM Sunday 3-December 2023

ಕೊಡ್ಲಿಪೇಟೆ : ಫೆ.9 ಮತ್ತು 10 ರಂದು ಶ್ರೀ ಗುರುಪೀಠ ಕಲ್ಲಳ್ಳಿ ಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ

07/02/2023

ಶನಿವಾರಸಂತೆ ಫೆ.7 :  ಕೊಡ್ಲಿಪೇಟೆ ಶ್ರೀ ಗುರುಪೀಠ ಕಲ್ಲಳ್ಳಿ ಮಠದ ಶ್ರೀ  ಗುರು ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವು ಫೆ.9 ಮತ್ತು 10 ರಂದು ನಡೆಯಲಿದೆ ಎಂದು ಕೊಡ್ಲಿಪೇಟೆ ಶ್ರೀ ಗುರುಪೀಠ ಕಲ್ಲಳ್ಳಿ ಮಠ ಹಾಗೂ ಕೊಡ್ಲಿಪೇಟೆ ವೀರಶೈವ ಮಂಡಳಿ ಅಧ್ಯಕ್ಷ ಎಸ್.ಎಸ್.ವರಪ್ರಸಾದ್ ತಿಳಿಸಿದರು.

ಶನಿವಾರ ಸಂತೆಯಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡ್ಲಿಪೇಟೆ ಶ್ರೀ ಗುರುಪೀಠ ಕಲ್ಲಳ್ಳಿ ಮಠಾಧೀಶರಾದ ಶ್ರೀ ರುದ್ರಮುನಿ ಮಹಾಸ್ವಾಮಿಗಳಿಗೆ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದ್ದು, ಮಹೋತ್ಸವದ ಅಂಗವಾಗಿ ಫೆ. 9ರಂದು ಶ್ರೀ ಕ್ಷೇತ್ರ ಕಲ್ಲಳ್ಳಿ ಮಠದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿದೆ.

ಫೆ.10ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಕ್ಷೇತ್ರ ಕಲ್ಲಳ್ಳಿ ಮಠದ ಆವರಣದಲ್ಲಿರುವ ಶ್ರೀ ವೀರಭದ್ರ ಸ್ವಾಮೀ ವೇದಿಕೆಯಲ್ಲಿ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಮತ್ತು ಧರ್ಮಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಶ್ರೀ ಕಾಡು ಸಿದ್ದೇಶ್ವರ ಮಠದ ಶ್ರೀ ಕರಿ ವೃಷಭದೇಸಿ ಕೇಂದ್ರ ಶಿವ ಯೋಗಿಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರು , ಸ್ವಾಮೀಜಿಗಳು, ಗಣ್ಯರು  ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮಹೋತ್ಸವದಲ್ಲಿ ಜಿಲ್ಲೆ ಹಾಗೂ  ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ತಾಲೂಕಿನ ಶ್ರೀ ಕ್ಷೇತ್ರ ಕಲ್ಲಳ್ಳಿ ಮಠದ ಭಕ್ತಾದಿಗಳು ಆಗಮಿಸಿ ಪಠಾಧಿಕಾರ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಎಚ್.ಸಿ.ಯತೀಶ್ ಕುಮಾರ್ ಮಾತನಾಡಿ, ಫೆ.9 ಮತ್ತು 10 ರಂದು ನಡೆಯಲಿರುವ ಶ್ರೀ ಗುರುಪೀಠ ಕಲ್ಲಳ್ಳಿ ಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವಕ್ಕೆ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಅಂದಾಜು 2,000 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಶ್ರೀ ಗುರುಪೀಠ ಕಲ್ಲಳ್ಳಿ ಮಠದೀಶ ಶ್ರೀ ರುದ್ರಮುನಿ ಮಹಾಸ್ವಾಮೀಜಿ,  ಆಡಳಿತ ಮಂಡಳಿ ಕಾರ್ಯದರ್ಶಿ, ಪಿ.ಎಸ್.ಲಿಂಗರಾಜ್  ಉಪಸ್ಥಿತರಿದ್ದರು.

ವರದಿ : ದಿನೇಶ್ ಮಾಲಂಬಿ (ಶನಿವಾರಸಂತೆ)