ಮಡಿಕೇರಿ ಫೆ.10 : ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಟಿ.ಜಾನ್ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸಂತಾಪ ಸೂಚಿಸಿದೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂತಾಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಹಿರಿಯ ಕಾಂಗ್ರೆಸ್ಸಿಗ ಟಿ.ಜಾನ್ ಅವರ ಗುಣಗಾನ ಮಾಡಿದರು. ಕೊಡುಗೈ ದಾನಿಯೂ ಆಗಿದ್ದ ಅವರು ಸಾಮಾಜಿಕ ಕಳಕಳಿಯೊಂದಿಗೆ ಯಶಸ್ವೀ ರಾಜಕಾರಣಿ ಎನಿಸಿಕೊಂಡಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ ಕಾಂಗ್ರೆಸ್ ಗಾಗಿ ಶ್ರಮಿಸಿದ ನಿಷ್ಠಾವಂತ ನಾಯಕ ಟಿ.ಜಾನ್ ಅವರನ್ನು ಕಳೆದುಕೊಂಡು ಪಕ್ಷ ಬಡವಾಗಿದೆ. ಯುವ ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದ ಅವರು ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ ಎಂದರು.
ಕೆಪಿಸಿಸಿ ಪದಾಧಿಕಾರಿಗಳಾದ ಕೆ.ಪಿ.ಚಂದ್ರಕಲಾ, ಸಿ.ಎಸ್.ಅರುಣ್ ಮಾಚಯ್ಯ, ಎಚ್.ಎಸ್.ಚಂದ್ರಮೌಳಿ, ಎ.ಎಸ್.ಪೆÇನ್ನಣ್ಣ, ಮೆರೋಜ್ ಖಾನ್, ಸುಮಾ ವಸಂತ್, ಮಿಟ್ಟು ಚಂಗಪ್ಪ, ವೀಣಾ ಅಚ್ಚಯ್ಯ, ಎಂ.ಸಿ.ನಾಣಯ್ಯ, ಜೀವಿಜಯ, ಮಂಥರ್ ಗೌಡ, ಕೆ.ಎಂ.ಲೋಕೇಶ್, ಹರಪಳ್ಳಿ ರವೀಂದ್ರ, ಬೇಕಲ್ ರಮಾನಾಥ್, ಶಿವುಮಾದಪ್ಪ, ಕೆ.ಎ.ಯಾಕೂಬ್, ರಾಜೇಶ್ ಎಲ್ಲಪ್ಪ ಸರಿತಾ ಪೂಣಚ್ಚ, ಕೆ.ಕೆ.ಮಂಜುನಾಥ್ ಕುಮಾರ್, ಮಂಜುನಾಥ್ ಗುಂಡುರಾವ್, ಎಚ್.ಎಂ.ನಂದಕುಮಾರ್, ತೆನ್ನಿರ ಮೈನಾ, ಮಡಿಕೇರಿ ಬ್ಲಾಕ್ ಅಧ್ಯಕ್ಷ ಹಂಸ, ಇಸ್ಮಾಯಿಲ್, ನವೀನ್, ರಂಜಿ ಪೂಣಚ್ಚ, ಶಶಿಧರ್, ಸತೀಶ್, ತಾರ ಅಯ್ಯಮ್ಮ, ಟಿ.ಎಚ್.ಉದಯ್ ಕುಮಾರ್, ಚಂದ್ರಶೇಖರ್ ಆರ್.ಪಿ, ಅಬ್ದುಲ್ ಲತೀಫ್, ಕೆ.ಎಂ.ಇಬ್ರಾಹಿಂ, ಪಿ.ಎಂ.ಖಾಸಿಂ, ಹರೀಶ್ ಬೋಪಣ್ಣ, ಕೊಲ್ಯದ ಗಿರೀಶ್, ನೆರವಂಡ ಉಮೇಶ್, ಟಿ.ಎಂ.ಅಯ್ಯಪ್ಪ, ಪ್ರಕಾಶ್ ಆಚಾರ್ಯ, ಬೊಳ್ಳಿಯಂಡ ಗಣೇಶ್, ವಿ.ಪಿ.ಸುರೇಶ್, ಅಂಬೆಕಲ್ಲು ನವೀನ್ ಕುಶಾಲಪ್ಪ, ಪೀಟರ್, ಫ್ಯಾನ್ಸಿ ಪಾರ್ವತಿ, ರವೂಫ್, ಭಾರ್ಗವ, ವಿವೇಕಾನಂದ ಪಿ.ಎಸ್, ಪುಷ್ಪ ಪೂಣಚ್ಚ, ಜಿಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರುಗಳು, ಡಿಸಿಸಿ ಸದಸ್ಯರುಗಳು ಹಾಗೂ ಕಾರ್ಯಕರ್ತರು ಸಂತಾಪ ಸೂಚಿಸಿದರು.