ಮಡಿಕೇರಿ ಫೆ.10 : ಅಬ್ದುಲ್ ಕಲಾಂ ಆಟ್ರ್ಸ್ ಹಾಗೂ ಸ್ಫೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಫೆ.18 ಮತ್ತು 19 ರಂದು ಐಪಿಎಲ್ ಮಾದರಿಯಲ್ಲಿ ಅಯ್ಯಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ನಡೆಯಲಿದೆ ಎಂದು ಅಯ್ಯಂಗೇರಿ ಗ್ರಾ.ಪಂ ಸದಸ್ಯ ಪಿ.ಎಂ.ಅಬ್ದುಲ್ ರಾಶೀದ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯ್ಯಂಗೇರಿ, ಸಣ್ಣ ಪುಲಿಕೋಟ್, ದೊಡ್ಡಪುಲಿಕೋಟ್, ಗೊಲ್ಲಕೇರಿ ವ್ಯಾಪ್ತಿಯ ಗ್ರಾಮಸ್ಥರನ್ನು ಒಗ್ಗೂಡಿಸುವ ಸಲುವಾಗಿ ಕ್ರಿಕೆಟ್ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಫೆ.18 ರಂದು ಬೆಳಗ್ಗೆ 9 ಗಂಟೆಗೆ ಅಯ್ಯಂಗೇರಿಯ ಕೊಲೊಂಬೊ ಮೈದಾನದಲ್ಲಿ ಪಂದ್ಯಾವಳಿಗೆ ಚಾಲನೆ ದೊರೆಯಲಿದ್ದು, ಕಾರ್ಯಕ್ರಮಕ್ಕೆ ಜಿಲ್ಲೆ ಮತ್ತು ರಾಜ್ಯದ ನಾಯಕರು ಪಾಲ್ಗೊಳ್ಳಲಿದ್ದು, 8 ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದೆ. ಒಟ್ಟು 130 ಆಟಗಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿಜೇತ ತಂಡಕ್ಕೆ ರೂ.33,333, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 16,666 ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ವಿವಿಧ ವಿಭಾಗದ ವೈಯಕ್ತಿಕ ಬಹುಮಾನ ನೀಡಲಾಗುವುದು. ಅಲ್ಲದೆ ಕಾರ್ಯಕ್ರಮದ ಪ್ರಯುಕ್ತ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‍ನ ಅಧ್ಯಕ್ಷ ಸಿ.ಎಂ.ಶಾಫಿ, ಉಪಾಧ್ಯಕ್ಷ ಸಾಬೀರ್, ಕಾರ್ಯದರ್ಶಿ ಸುಹೇಬ್, ಸದಸ್ಯ ಅಬ್ದುಲ್ ಬಾಸಿದ್ ಹಾಜರಿದ್ದರು.