Advertisement
10:00 AM Sunday 3-December 2023

ಫೆ.11 ರಂದು “3ನೇ ಮಹಾಯುದ್ಧ ನಿಲ್ಲಿಸಿ” ಜಾಗೃತಿ ಅಭಿಯಾನ

10/02/2023

ಮಡಿಕೇರಿ ಫೆ.10 : ಅಹ್ಮದಿಯಾ ಮುಸ್ಲಿಂ ಜಮಾಅತ್ ವತಿಯಿಂದ “3ನೇ ಮಹಾಯುದ್ಧವನ್ನು ನಿಲ್ಲಿಸಿ” ಎಂಬ ವಿಷಯದಡಿ ಭಾರತದ ವಿವಿಧೆಡೆ ಶಾಂತಿಯುತ ಅಭಿಯಾನ ನಡೆಯುತ್ತಿದ್ದು, ಇದರ ಭಾಗವಾಗಿ ಮಡಿಕೇರಿ ನಗರದಲ್ಲೂ ಜಾಗೃತಿ ಕಾರ್ಯಕ್ರಮ ಫೆ.11 ರಂದು ನಡೆಯಲಿದೆ ಎಂದು ಸಂಘಟನೆಯ ಮಡಿಕೇರಿಯ ಅಧ್ಯಕ್ಷ ಜಿ.ಎಂ.ಮೊಹಮ್ಮದ್ ಷರೀಫ್ ತಿಳಿಸಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ವಿಶ್ವದ ಶಾಂತಿ ಮತ್ತು ಭದ್ರತೆಗೆ ಆದ್ಯತೆ ನೀಡುವ ಅಂಶಗಳನ್ನು ಪ್ರಸ್ತಾಪಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
20ನೇ ಶತಮಾನದಲ್ಲಿ ಘಟಿಸಿದ ಎರಡು ವಿನಾಶಕಾರಿ ವಿಶ್ವ ಯುದ್ಧಗಳಿಂದ ಪಾಠಗಳನ್ನು ಕಲಿಯಬೇಕು ಎಂದು ಅಹ್ಮದಿಯಾ ಮುಸ್ಲಿಂ ಜಮಾಅತಿನ ಜಾಗತಿಕ ನೇತಾರ ಹಝ್‍ರತ್ ಮಿರ್ಝಾ ಮಸ್‍ರೂರ್ ಅಹ್ಮದ್ ಸಾಹಿಬ್ ಹಲವು ವರ್ಷಗಳಿಂದ ಲೋಕದ ಪ್ರಮುಖ ರಾಷ್ಟ್ರಗಳಿಗೆ ಮುನ್ನೆಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ಹೇಳಿದ್ದಾರೆ.