ಮಡಿಕೇರಿ ಫೆ.14 : ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪ್ರತೀ ವರ್ಷ ಸಂಪ್ರದಾಯದಂತೆ ಮಹಾಶಿವರಾತ್ರಿಯನ್ನು ನಡೆಸಿಕೊಂಡು ಬರುತ್ತಿರುವ ಹಿನ್ನಲೆಯಲ್ಲಿ ಈ ವರ್ಷವೂ ಫೆ.18 ರಂದು ಮಹಾಶಿವರಾತ್ರಿ ಪೂಜೆ ನಡೆಯಲಿದೆ.
ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಫೆ.18 ರಂದು ಬೆಳಗ್ಗೆ 7 ಗಂಟೆಗೆ ಶತರುದ್ರಾಭಿಷೇಕ, ಬೆಳಗ್ಗೆ 9.30 ಗಂಟೆಗೆ ರುದ್ರಹೋಮ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ ತಾಯಂಬಕ ಸೇವೆ, ಸಂಜೆ 6.30 ಗಂಟೆಯಿಂದ ಏಕಾದಶ ರುದ್ರಾಭಿಷೇಕ, ಮಹಾಮಂಗಳಾರತಿ, ದೇವರ ನೃತ್ಯ ಉತ್ಸವ. ಸಂಜೆ 7.30 ಗಂಟೆಗೆ ಲಘು ಉಪಹಾರ. ರಾತ್ರಿ 11 ಗಂಟೆಗೆ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಕಲಾಮಂಡಳಿ ಕೊಲ್ಲಂಗಾಲ ಕಾಸರಗೋಡು ಯುವಕ ಯಕ್ಷಗಾನ ಕಲಾರಂಗ ಸುಳ್ಯ ಇವರಿಂದ ಯಕ್ಷಗಾನ ಬಯಲಾಟ ಪ್ರಸಂಗ “ಶ್ರೀ ಕೃಷ್ಣ ಲೀಲಾಮೃತ ಕಂಸವಧೆ ಶಿವ ತಪೋಭಂಗ” ನಡೆಯಲಿದೆ.
ತಲಕಾವೇರಿ ಶ್ರೀ ತಲಕಾವೇರಿ ದೇವಾಲಯದಲ್ಲಿ ಫೆಬ್ರವರಿ, 18 ರಂದು ಬೆಳಗ್ಗೆ 9.30 ಗಂಟೆಗೆ ಶತರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಂಜೆ 7 ಗಂಟೆಗೆ ಏಕಾದಶರುದ್ರಾಭಿಷೇಕ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಸಾರ್ವಜನಿಕ ಭಕ್ತಾದಿಗಳು ದೇವಾಲಯಗಳಲ್ಲಿ ನಡೆಯಲಿರುವ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳ ಪರವಾಗಿ ಕಾರ್ಯನಿರ್ವಾಹಕಾಧಿಕಾರಿ ಅವರು ತಿಳಿಸಿದ್ದಾರೆ.









