ಚೆಂಬು : ಫೆ.15 ರಂದು ರಕ್ತದಾನ ಶಿಬಿರ
14/02/2023

ಮಡಿಕೇರಿ ಫೆ.14 : ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಪಂಚಾಯಿತಿ ಆವರಣದಲ್ಲಿ ಕೊಡಗು ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವತಿಯಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶ್ರೀ ಭಗವಾನ್ ಸಂಘ ಚೆಂಬು ಗ್ರಾಮ ಮತ್ತು ಮಿತ್ರಕೂಟ ಕ್ರೀಡಾ ಸಂಘಗಳ ಸಹಯೋಗದಲ್ಲಿ ಫೆ.15 ರಂದು ರಕ್ತದಾನ ಶಿಬಿರ ನಡೆಯಲಿದೆ.
ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪ್ರಕಟಣೆಯಲ್ಲಿ ಕೋರಿದೆ. ಹೆಚ್ಚಿನ ಮಾಹಿತಿಗೆ ಧನಂಜಯ ಎಂ. 9844461777 ಸಂಪರ್ಕಿಸಬಹುದು.
