Advertisement
3:49 AM Saturday 2-December 2023

ಮಾಂಸ ಮಾರಾಟ ನಿಷೇಧಿತ ದಿನದ ವಿವರ

14/02/2023

ಮಡಿಕೇರಿ ಫೆ.14 : ನಗರಸಭಾ ವ್ಯಾಪ್ತಿಯಲ್ಲಿ ಬರುವ ಕುರಿ, ಕೋಳಿ ಮತ್ತು ಹಂದಿ ಮಾಂಸ ವ್ಯಾಪಾರ ಮಾಡುತ್ತಿರುವವರು  ಸ್ಥಳೀಯ ಮತ್ತು ರಾಷ್ಟ್ರೀಯ ಹಬ್ಬಗಳ ದಿವಸಗಳಂದು ತಾವು ಸ್ವಯಂ ಪ್ರೇರಿತರಾಗಿ ಪ್ರಾಣಿವದೆ ಮತ್ತು ಮಾಂಸ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಬೇಕು.
ಉಲ್ಲಂಘಿಸಿದಲ್ಲಿ ತಮ್ಮ ವ್ಯಾಪಾರದ ಪರವಾನಗಿ ರದ್ದುಗೊಳಿಸಲಾಗುವುದು ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ಸಾಮಾಗ್ರಿಗಳನ್ನು ನಗರಸಭೆ ವಶಕ್ಕೆ ತೆಗೆದುಕೊಂಡು ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ  ವಿಜಯ  ತಿಳಿಸಿದ್ದಾರೆ.
ಮಾಂಸ ಮಾರಾಟ ನಿಷೇಧಿತ ದಿನದ ವಿವರ ಇಂತಿದೆ:- ಫೆಬ್ರವರಿ, 18 ಮಹಾ ಶಿವರಾತ್ರಿ, ಮಾರ್ಚ್, 30 ಶ್ರೀ ರಾಮ ನವಮಿ, ಏಪ್ರಿಲ್, 3 ರಂದು ಮಹಾವೀರ ಜಯಂತಿ, ಮೇ, 5 ರಂದು ಬುದ್ಧ ಪೂರ್ಣಿಮ, ಸೆಪ್ಟೆಂಬರ್, 6 ರಂದು ಕೃಷ್ಣ ಜನ್ಮಾಷ್ಠಮಿ, ಸೆಪ್ಟೆಂಬರ್, 18 ರಂದು ಗಣೇಶ ಚತುರ್ಥಿ, ಅಕ್ಟೋಬರ್, 2 ರಂದು ಗಾಂಧಿ ಜಯಂತಿ ಹಾಗೂ ಅಕ್ಟೋಬರ್, 18 ರಂದು ತುಲಾ ಸಂಕ್ರಮಣ. ಈ ದಿನಗಳಂದು ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.