ಮಡಿಕೇರಿ ಫೆ.16 : ಮೂರ್ನಾಡು ಸಮೀಪದ ಕೊಂಡಂಗೇರಿ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮವು ಫೆ.17 ರಿಂದ 21ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸುನ್ನಿ ಮುಸ್ಲಿಂ ಜಮಅತ್ ನ ಸದಸ್ಯ ಪಿ.ಎಂ.ಹನೀಫ್ ಸಖಾಫಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಐದು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಫೆ.17 ರಂದು ಅಪರಾಹ್ನ 2 ಗಂಟೆಗೆ ಸಯ್ಯಿದ್ ಹಸನ್ ಆಟಕೋಯ ತಂಙಳ್ ಆದೂರು ಹಾಗೂ ತಕ್ಕ ಮುಖ್ಯಸ್ಥರು ದರ್ಗಾ ಅಲಂಕಾರ ಮತ್ತು ಸಾಮೂಹಿಕ ಪ್ರಾರ್ಥನೆಯ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಮಾಅತ್ ಅಧ್ಯಕ್ಷರಾದ ಪಿ.ಇ.ಮೊಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಸಲಿದ್ದು, ರಾತ್ರಿ 7 ಗಂಟೆಗೆ ಸಯ್ಯಿದ್ ಜಾಫರ್ ಸಾದಿಖ್ ಕುಂಬೋಲ್ ಅವರ ನೇತೃತ್ವದಲ್ಲಿ “ಜಲಾಲಿಯ್ಯ ರಾತೀಬ್” ಆದ್ಯಾತ್ಮಿಕ ಕಾರ್ಯಕ್ರಮ ಮೂಡಿಬರಲಿದೆ ಎಂದು ತಿಳಿಸಿದರು.
ಫೆ.18 ರಂದು ರಾತ್ರಿ 7 ಗಂಟೆಗೆ “ಅಂತರ್ಜಾಲದ ಬಳಕೆ ಮತ್ತು ಯವ್ವನ” ಎಂಬ ವಿಷಯದಲ್ಲಿ ವಾಗ್ಮಿಗಳಾದ ಅನಸ್ ಸಿದ್ದೀಕಿ ಸಖಾಫಿ ಭೋದನೆ ನೀಡಲಿದ್ದು, ಫೆ.19 ರಂದು ರಾತ್ರಿ 7 ಗಂಟೆಗೆ “ನಮ್ಮ ಪರಂಪರೆ” ಎಂಬ ವಿಷಯದಲ್ಲಿ ಗಣ್ಯರಾದ ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಪ್ರವಚನ ನೀಡಲಿದ್ದಾರೆ ಎಂದು ತಿಳಿಸಿದರು.
ಉರೂಸಿನ ಪ್ರಮುಖ ದಿನವಾದ ಫೆ.20 ರಂದು ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ಕಾರ್ಯಕ್ರಮಕ್ಕೆ ಸಹಾಯಕ ಖಾಝಿಗಳಾದ ಶಾದುಲಿ ಫೈಝಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೂರ್ಗ್ ಜಂಞಯತ್ತುಲ್ ಉಲಾಮ ಅಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ವಹಿಸಲಿದ್ದಾರೆ. ರಾಹ್ಯ ವಕ್ಫ್ ಅಧ್ಯಕ್ಷರಾದ ಎನ್.ಕೆ.ಎಂ ಶಾಫಿ ಸಅದಿ ಅವರು ಸಮ್ಮುಖದಲ್ಲಿ ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ ಎಂದರು.
ಫೆ.20 ರಾತ್ರಿ 7 ಗಂಟೆಗೆ ಮಹಾತ್ಮರುಗಳ ಮಾದರಿ ಬದುಕು ಎಂಬ ವಿಷಯದಲ್ಲಿ ವಾಗ್ಮಿಗಳಾದ ಮುಸ್ತಫ ಸಖಾಫಿ ತೆನ್ನಲ ಮಾತನಾಡಲಿದ್ದು, ಫೆ.21 ರಂದು ಬಹುಸಯ್ಯಿದ್ ಸುಹೈಲ್ ಅಸ್ಸಖಾಫ್ ಅವರ ನೇತೃತ್ವದಲ್ಲಿ
ರಾತ್ರಿ 7 ಗಂಟೆಗೆ ಉರೂಸ್ ಸಮಾರೋಪವಾಗಿ ಬುರ್ದಾ, ಖವಾಲಿ, ದುಆ ಸಮ್ಮೇಳನ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಜಾತಿ, ಮತ, ಬೇಧವಿಲ್ಲದೆ ಸಹಕರಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಇ.ಮೊಹಮ್ಮದ್ ಹಾಜಿ, ಉಪಾಧ್ಯಕ್ಷ ಪಿ.ಹೆಚ್.ಅಬ್ಬಾಸ್, ಸದಸ್ಯ ಪಿ.ಎಂ.ಅಬ್ಬಾಸ್ ಉಪಸ್ಥಿತರಿದ್ದರು.








