Advertisement
3:13 AM Friday 8-December 2023

ನಲ್ವತೋಕ್ಲು-ಚೊಕಂಡಳ್ಳಿ : ಫೆ.19 ರಂದು ಮಜ್ಲಿಸ್ನೂರ್ ಹಾಗೂ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ

16/02/2023

ಮಡಿಕೇರಿ ಫೆ.16 : ವಿರಾಜಪೇಟೆಯ ನಲ್ವತೋಕ್ಲು-ಚೊಕಂಡಳ್ಳಿ ಗ್ರಾಮದ ಅಲ್ ಹಿದಾಯ ಸಮಿತಿ ವತಿಯಿಂದ ಫೆ.19 ರಂದು ಮಜ್ಲಿಸ್ನೂರ್ ಹಾಗೂ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಝಿಯಾಉದ್ದೀನ್ ಬಾಖವಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4 ಗಂಟೆಗೆ ಮರ್ಹೂಂ ಸೈಯ್ಯಿದ್ ಆಟ್ಟಕೋಯ ತಂಙಳ್ ಅವರ ಖಬರ್ ಝಿಯಾರತ್‍ನೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, 4.30ಕ್ಕೆ ಧ್ವಜಾರೋಹಣ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಂಜೆ 7 ಗಂಟೆಗೆ ಸಯ್ಯಿದ್ ಇಬ್ರಾಹಿಂ ಬಾದ್ ಷಾ ತಂಙಳ್ ಅಲ್ ಬುಖಾರಿ ಅಲ್ ಅಝ್‍ಹರಿ ಮಂಗಳೂರು ಅವರ ನೇತೃತ್ವದಲ್ಲಿ ಮಜ್ಲಿಸ್ನೂರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾತ್ರಿ 8 ಗಂಟೆಗೆ ನಲ್ವತೋಕ್ಲು ಮಹಲ್ ಅಧ್ಯಕ್ಷ ಜನಾಬ್ ಡಿ.ಹೆಚ್.ಸೂಫಿಹಾಜಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ಕೊಡಗು ಜಿಲ್ಲೆಯ ನಾಯಿಬ್ ಖಾಝಿಗಳಾದ ಉಸ್ತಾದ್ ಶಾದುಲಿ ಫೈಝಿ ಪ್ರಾರ್ಥನೆ ನಡೆಸಲಿದ್ದಾರೆ.
ಜಿಲ್ಲೆಯ ನಾಯಿಬ್ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರುಗಳಾದ ಎಂ.ಎಂ.ಅಬ್ದುಲ್ಲ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿ ಮಾತನಾಡಲಿದ್ದಾರೆ. ನಂತರ ಖ್ಯಾತ ಅಂತರಾಷ್ಟ್ರೀಯ ಪ್ರಭಾಷಕಾರ ಉಸ್ತಾದ್ ಅಲ್ ಹಾಫಿಲ್ ಸಿರಾಜುದ್ಧೀನ್ ಖಾಸಿಮಿ ಪತ್ತನಾಪುರಂ ಮುಖ್ಯ ಭಾಷಣ ನಡೆಸಲಿದ್ದು, ಕಾರ್ಯಕ್ರಮಕ್ಕೆ ಜಿಲ್ಲೆಯ ಹಲವಾರು ಉಲಾಮ, ಉಮಾರ ನೇತಾರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನಲ್ವತೋಕ್ಲು-ಚೊಕಂಡಳ್ಳಿ ಗ್ರಾಮದಲ್ಲಿ 2017 ರಲ್ಲಿ ರೂಪಿಸಲ್ಪಟ್ಟ ಅಲ್ ಹಿದಾಯ ಸಮಿತಿಯು ಹಲವಾರು ಚಾರಿಟಿ ಚಟುವಟಿಕೆಯಲ್ಲಿ ಹೆಸರುವಾಸಿಯಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ರಶೀದ್ ದಾರಿಮಿ, ಉಪಾಧ್ಯಕ್ಷ ಸಹದ್ ಫೈಝಿ, ಖಜಾಂಚಿ ನೌಷಾದ್ ದಾರಿಮಿ ಉಪಸ್ಥಿತರಿದ್ದರು.