ಮಡಿಕೇರಿ ಫೆ.17 : ಚುನಾವಣೆ ಸಮೀಪಿಸುತ್ತಿರುವಂತೆಯೇ ಜನರ ಕಿವಿಗೆ ಹೂವು ಇಡುವ ರೀತಿಯ ಬಜೆಟ್ ನ್ನು ಮಂಡಿಸಲಾಗಿದೆ. ಇಲ್ಲಿ ಘೋಷಿಸಿರುವ ಅನೇಕ ಭರವಸೆಗಳನ್ನು ಈಡೇರಿಸುವ ವಿಶ್ವಾಸ ಸರ್ಕಾರಕ್ಕೇ ಇದ್ದಂತ್ತಿಲ್ಲ. ಕೊಡಗನ್ನು ಸರ್ಕಾರ ಮರೆತೇ ಬಿಟ್ಟಿದೆ, ವನ್ಯಜೀವಿಗಳ ದಾಳಿ, ರಸ್ತೆಗಳ ಅವ್ಯವಸ್ಥೆ, ಅತಿವೃಷ್ಟಿಯಿಂದಾಗುವ ಅನಾಹುತ, ಬೆಳೆಗಾರರು ಹಾಗೂ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿಲ್ಲದಂತೆ ಸರ್ಕಾರ ವರ್ತಿಸಿದೆ. ಯಾವುದೇ ಭರವಸೆಗಳನ್ನು ಮೂಡಿಸದ ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ಕೇವಲ 100 ಕೋಟಿ ರೂ.ಗಳನ್ನು ನೀಡಲಾಗಿದೆ. ಜಿಲ್ಲೆಯ ಶಾಸಕರುಗಳಿಗೆ ಸ್ವಾಭಿಮಾನವಿದ್ದರೆ ಈ ಹಣವನ್ನು ತಿರಸ್ಕರಿಸಿ ಸಾವಿರ ಕೋಟಿಗೆ ಬೇಡಿಕೆ ಇಡಲಿ.
(ಸೂರಜ್ ಹೊಸೂರು, ಅಧ್ಯಕ್ಷರು, ಕಾಂಗ್ರೆಸ್ ಸಾಮಾಜಿಕ ಜಾಲತಾಣ, ಕೊಡಗು ಜಿಲ್ಲೆ)








