ಮಡಿಕೇರಿ ಫೆ.20 : ನಗರದ ಹೆಸರಾಂತ ಪ್ರಶಾಂತ್ ಮರದ ಪೀಠೋಪಕರಣ ಮಳಿಗೆ ಅಗ್ನಿಗಾಹುತಿಯಾಗಿದೆ. ಸೋಮವಾರ ನಸುಕಿನ ವೇಳೆ ಈ ಘಟನೆ ನಡೆದಿದ್ದು, ಸತತ 10 ಗಂಟೆಗಳ ನಿರಂತರ ಕಾರ್ಯಾಚರಣೆಯ ನಂತರ ಅಗ್ನಿ ನಿಯಂತ್ರಣಕ್ಕೆ ಬಂದಿದೆ.
ಕೈಗಾರಿಕಾ ಬಡಾವಣೆಯಲ್ಲಿರುವ ಪ್ರಶಾಂತ್ ವುಡ್ ಫರ್ನಿಚರ್’ಗೆ ಸೇರಿದ ದಾಸ್ತಾನು ಮಳಿಗೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಮರದ ದಾಸ್ತಾನಾದ ಕಾರಣ ಬೆಂಕಿ ಸಂಪೂರ್ಣ ಮಳಿಗೆಯನ್ನು ವ್ಯಾಪಿಸಿತು. ಮಡಿಕೇರಿ, ಕುಶಾಲನಗರ ಮತ್ತು ಗೋಣಿಕೊಪ್ಪದಿಂದ ಆಗಮಿಸಿದ ಒಟ್ಟು ನಾಲ್ಕು ಅಗ್ನಿಶಾಮಕ ವಾಹನಗಳು ನಿರಂತರ ಕಾರ್ಯಾಚರಣೆ ನಡೆಸಿದವು. ಸಿಬ್ಬಂದಿಗಳು ಸತತ ಪರಿಶ್ರಮ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅಗ್ನಿ ಆಕಸ್ಮಿಕದಿಂದ ಪ್ರಶಾಂತ್ ಫರ್ನಿಚರ್ಸ್ ನ ಮಾಲೀಕ ಪ್ರಶಾಂತ್ ಅವರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.


















