ಮಡಿಕೇರಿ ಫೆ.20 : ಹಾಲುಗುಂದ ಗ್ರಾ.ಪಂ ಮತ್ತು ಜಿಲ್ಲಾ ಅಕ್ಷರ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಹಾಲುಗುಂದ ಕೊಂಡಂಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಎಲಿಯಂಗಾಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬೈರಂಬಾಡ ಶಾಲಾ ಮಕ್ಕಳಿಗೆ ಆಯಾ ಶಾಲೆಗಳಲ್ಲಿ ಗಣಿತ ಸ್ಪರ್ಧೆ ನಡೆಯಿತು.
ಗಣಿತ ಸ್ಪರ್ಧೆಯ 4ನೇ ತರಗತಿ ವಿಭಾಗದಲ್ಲಿ ಬೈರಂಬಾಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಂಜು ಪ್ರಥಮ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಲಿಯಂಗಾಡು ಸಾರ ದ್ವಿತೀಯ ಹಾಗೂ ಮುಫೀದ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
5ನೇ ತರಗತಿ ವಿಭಾಗದಲ್ಲಿ ಬೈರಂಬಾಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೋಕ್ಷಿತ್ ಪ್ರಥಮ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಡಂಗೇರಿಯ ಮೊಹಮ್ಮದ್ ಮಿದಿಲಾಜ್ ದ್ವಿತೀಯ, ಎಲಿಂಗಾಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕದೀಜ ಕೆ ಎಂ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
6ನೇ ತರಗತಿ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಡಂಗೇರಿಯ ಎಚ್.ಎಂ.ಶೈಮಾ, ಅದೇ ಶಾಲೆಯ ಫಾತಿಮತ್ ತಶ್ರೀಫ್ ದ್ವಿತೀಯ ಹಾಗೂ ಫಿದಾ ಪಿಎಸ್ ತೃತೀಯ
ಸ್ಥಾನವನ್ನು ಪಡೆದರು.
ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಅಭಿನಂದನಾ ಪತ್ರವನ್ನು ನೀಡಲಾಯಿತು.
ಗ್ರಾ.ಪಂ ಅಧ್ಯಕ್ಷೆ ಸೀತಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಉಪಾಧ್ಯಕ್ಷ ದಿನೇಶ್, ಅಭಿವೃದ್ಧಿ ಅಧಿಕಾರಿ ಕಾಂಚನ, ಸದಸ್ಯರುಗಳಾದ ಪೂವಯ್ಯ, ಸ್ಮಿತಾ, ಆಮಿನ, ಹನೀಫ್, ಅದ್ರಮಾನ್, ರಮ್ಲತ್ ಕಾರ್ಯದರ್ಶಿ ಕವಿತಾ, ಸಿಬ್ಬಂದಿಗಳಾದ ಮಂಜುನಾಥ್, ದೇವಮ್ಮ, ಗ್ರಂಥಪಾಲಕಿ ಪ್ರಿಯ ಹಾಗೂ ಕೊಂಡಂಗೇರಿ ಶಾಲಾ ಮುಖ್ಯ ಶಿಕ್ಷಕರಾದ ರವಿಕುಮಾರ್ ಹಾಜರಿದ್ದರು.