ಮಡಿಕೇರಿ ಫೆ.20 : ಎನ್.ಸಿ.ಸಿಯ ಥಲ್ ಸೈನಿಕ್ ಕ್ಯಾಂಪ್‌ನಲ್ಲಿ ಕರ್ನಾಟಕ ಗೋವಾ ಡೈರೆಕ್ಟೋರೇಟ್ ಕಾಂಟಿಜೆಂಟ್ ಅನ್ನು ನವದೆಹಲಿಯಲ್ಲಿ ಪ್ರತಿನಿಧಿಸಿ ರಾಷ್ಟ್ರಮಟ್ಟದ ಕಂಚಿನ ಪದಕ ಪಡೆದು ಅತ್ಯುನ್ನತ ಸಾಧನೆ ಮಾಡಿದ ಸೀನಿಯರ್ ಅಂಡರ್ ಆಫೀಸರ್ ಅಪ್ಪಚ್ಚಂಡ ಪ್ರಜ್ವಲ್ ಅಯ್ಯಪ್ಪಗೆ ಮುಖ್ಯಮಂತ್ರಿಗಳ ಪ್ರಶಂಸನಾಪತ್ರ ಮತ್ತು ಮೆಡಲ್ ಲಭಿಸಿದೆ. ಬೆಂಗಳೂರಿನ ಕ್ರೈಸ್ಟ್ ಜಯಂತಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಪ್ರಶಸ್ತಿ ಪತ್ರ ಮತ್ತು ಮೆಡಲ್ ಪ್ರಧಾನ ಮಾಡಿದರು.
ಗೋಣಿಕೊಪ್ಪಲು ಕಾವೇರಿ ಕಾಲೇಜು ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿರುವ ಪ್ರಜ್ವಲ್, ಎಂ ಬಾಡಗ ಗ್ರಾಮದ ಅಪ್ಪಚ್ಚಂಡ ಕುಶಾಲಪ್ಪ ಮತ್ತು ಶಶಿ ಕುಶಾಲಪ್ಪ ಅವರ ಪುತ್ರರಾಗಿದ್ದಾರೆ.