ಶಿಡ್ಲಘಟ್ಟ ಫೆ.22 : ಸುಟ್ಟು ಕರಕಲಾದ ಮೂವರ ಮೃತದೇಹ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಯಣ್ಣೂರು ಗ್ರಾಮದ ಮನೆಯೊಂದರಲ್ಲಿ ಪತ್ತೆಯಾಗಿದೆ.
ಒಂದೇ ಕುಟುಂಬದ ನೇತ್ರಾ(35), ಪುತ್ರಿಯರಾದ ವರ್ಷಿತ(7 ತರಗತಿ) ಹಾಗೂ ಸ್ನೇಹ(4 ತರಗತಿ) ಅವರುಗಳ ಮೃತದೇಹ ಮನೆಯೊಳಗೆ ಕಂಡು ಬಂದಿದೆ. ನೇತ್ರಾರ ಪತಿ ಸೊಣ್ಣಪ್ಪ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಈ ಸಾವಿಗೆ ಕಾರಣ ಏನು ಮತ್ತು ಯಾವ ರೀತಿ ನಡೆದಿದೆ ಎನ್ನುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸೊಣ್ಣಪ್ಪ ಅವರಿಗೆ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.












