ನಾಪೋಕ್ಲು ಫೆ.22 : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ ಪ್ರಯುಕ್ತ
ಎಮ್ಮೆಮಾಡು ಗ್ರಾಮದ ತಾಜೂಲ್ ಇಸ್ಲಾಂ ಮುಸ್ಲಿಂ ಜಮಾಯತ್ ವತಿಯಿಂದ ಪ್ರತಿ ವರ್ಷ ನಡೆಯುವ ವಾರ್ಷಿಕ ಮಖಾಂ ಉರುಸ್ ಸಮಾರಂಭಕ್ಕೆ ಧ್ವಜಾರೋಹಣದ ಮೂಲಕ ಚಾಲನೆ ದೊರೆಯಿತು.
ನಿತ್ಯದ ನಮಾಜ್ ಬಳಿಕ ದಫ್ ನೊಂದಿಗೆ ದರ್ಗಾಕ್ಕೆ ತೆರಳಿದ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕೊಡಿ ತೂಕಲ್ ಮೂಲಕ ಚಾಲನೆ ನೀಡಿದರು.
ಜಮಾಯತ್ ಅಧ್ಯಕ್ಷ ಪಿ.ಎ.ಅಬೂಬಕ್ಕರ್ ಸಖಾಫೀ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಸ್ಥಳೀಯ ಮುದರಿಸರಾದ ಅಬ್ದುಲ್ ಸಲಾಂ ಶಾಮಿಲ್ ಇರ್ಫಾನಿ, ಖತೀಬರಾದ ಮುಹ್ಸಿನ್ ಹುದವಿ ಕೆ.ಎಂ.ಹುಸೈನ್ ಸಖಾಫಿ ಅಲಿ ನೆರೂಟ್, ಸೈಯದ್ ಅಬ್ದುಲ್ ಅಝೀಜ್, ಸಹದಿಯ ಅನಾಥಾಲಯದ ಅಧ್ಯಕ್ಷ ಅಬ್ದುಲ್ ರೆಹಮಾನ್ ಪೂಡಿಯೋಡಿ, ಗ್ರಾ.ಪಂ ಸದಸ್ಯರಾದ ಚಕ್ಕೆರ ಇಸ್ಮೈಲ್, ಅಬ್ದುಲ್ ಗಫೂರ್ ಪಡಿಯಾಣಿ, ಯೂಸುಫ್ ಪಡಿಯಾಣಿ, ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿದ್ದು, ಫೆ.27ರಂದು ಸರ್ವಧರ್ಮ ಸಮ್ಮೇಳನ ನಡೆಯಲಿದೆ.
ಅಂದು ಭಕ್ತರಿಗೆ ಅನ್ನದಾನ ವು ನಡೆಯಲಿದ್ದು, ಅಧಿಕ ಸಂಖ್ಯೆಯ ಭಕ್ತರು ಆಗಮಿಸಲಿದ್ದಾರೆ.
ವರದಿ : ದುಗ್ಗಳ ಸದಾನಂದ