ಮಡಿಕೇರಿ ಫೆ.22- : ಮೈಸೂರಿನ ರಂಗಾಯಣದ ವತಿಯಿಂದ ಫೆ.25 ರಂದು ಶನಿವಾರ ಸಂಜೆ 6 ಗಂಟೆಗೆ ಕುಶಾಲನಗರದಲ್ಲಿ ಟಿಪ್ಪು ನಿಜಕನಸುಗಳು ನಾಟಕ ಆಯೋಜಿಸಲಾಗಿದೆ.
ಕುಶಾಲನಗರದ ನೂತನ ಕಲಾಮಂದಿರದಲ್ಲಿ ಟಿಪ್ಪು ನಿಜ ಕನಸುಗಳು ನಾಟಕ ಆಯೋಜಿತವಾಗಿದ್ದು, ರಂಗಾಯಣದ ನಿದೇ೯ಶಕ ಅಡ್ಡಂಡ ಕಾಯ೯ಪ್ಪ ಈ ನಾಟಕ ರಚಿಸಿ ನಿದೇ೯ಶನ ಮಾಡಿದ್ದಾರೆ.
ಹೆಸರಾಂತ ಕಲಾವಿದ ಶಶಿಧರ ಅಡಪ ರಂಗವಿನ್ಯಾಸ ಮಾಡಿದ್ದು, ಪ್ರಮೋದ್ ಶಿಗ್ಗಾಂವ್ ವಸ್ತ್ರ ವಿನ್ಯಾಸ, ಆರ್.ಸಿ.ಧನಂಜಯ, ಸುಬ್ರಹ್ಮಣ್ಯ ಸಂಗೀತ, ಮಹೇಶ ಕಲ್ಲತ್ತಿ ಅವರ ಬೆಳಕು ರಂಗಸಜ್ಜಿಕೆಗಿದೆ.
ಬಚ್ಚಿಡಲಾದ ಅನೇಕ ಸತ್ಯಗಳನ್ನು ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸುವ ದೖಷ್ಟಿಯಿಂದ ಹೊರಚೆಲ್ಲಲು 15 ದೃಶ್ಯಗಳುಳ್ಳ ಟಿಪ್ಪು ನಿಜಕನಸು ನಾಟಕ ಪ್ರಸ್ತುತ ಪಡಿಸಲಾಗುತ್ತಿದೆ. ಡಾ. ಐ.ಮಾ.ಮುತ್ತಣ್ಣ, ಆರ್.ಡಿ.ಶಮಾ೯, ಡಾ.ಚಿದಾನಂದಮೂತಿ೯ ಅವರ ಕೖತಿಗಳನ್ನು ಆದರಿಸಿದ್ದಲ್ಲದೇ ಸ್ವತ ಟಿಪ್ಪುವಿನ ಕಾಲಘಟ್ಟದ ಇತಿಹಾಸಕಾರ ಹುಸೇನ್ ಅಲಿ ಕಿಮಾ೯ನಿ ರಚಿಸಿದ ಹೈದರ್ ನಿಶಾನಿ ಕೃತಿಗಳನ್ನು ಕೂಡ ನಾಟಕ ರಚನೆ ಸಂದಭ೯ ಅವಲೋಕಿಸಲಾಗಿದೆ. ಇದೆಲ್ಲದರ ಒಟ್ಟು ಸತ್ಯಾಂಶವಾಗಿಯೇ 38 ಕಲಾವಿದರು ನಟಿಸಿರುವ ಟಿಪ್ಪು ನಿಜ ಕನಸುಗಳು ರೂಪುಗೊಂಡಿದೆ ಎಂದು ವಿದೇ೯ಶಕ ಅಡ್ಡಂಡ ಕಾಯ೯ಪ್ಪ ತಿಳಿಸಿದ್ದಾರೆ.
ರಾಜ್ಯವ್ಯಾಪಿ ಟಿಪ್ಪು ನಿಜಕನಸುಗಳು ನಾಟಕ ಅತ್ಯಂತ ಯಶಸ್ವಿಯಾಗಿದ್ದು, ನಾಟಕ ಪುಸ್ತಕ ಈಗಾಗಲೇ 25 ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿದೆ. 80 ಸಾವಿರ ಜನರಿಗೆ ಈ ಸಾಹಿತ್ಯ ತಲುಪಿದೆ. ಕುಶಾಲನಗರದಲ್ಲಿ ಟಿಪ್ಪು ನಿಜಕನಸುಗಳು ನಾಟಕದ 38 ನೇ ಪ್ರದಶ೯ನ ಆಯೋಜಿತವಾಗಿದೆ ಎಂದು ಮಾಹಿತಿ ನೀಡಿರುವ ಅಡ್ಡಂಡ ಕಾಯ೯ಪ್ಪ, ಕಳೆದ 3 ವಷ೯ಗಳಿಂದ ರಂಗಾಯಣವು ಕಲೆಗೆ ಪ್ರಾಧಾನ್ಯತೆ ನೀಡುತ್ತಾ ಬಂದಿದೆ. ಈ ಮೂಲಕ ರಾಜ್ಯವ್ಯಾಪಿ ರಂಗಾಯಣ ಮನೆಮಾತಾಗಿದೆ ಎಂದೂ ಕಾಯ೯ಪ್ಪ ಹೇಳಿದರು. ಟಿಕೇಟ್ ಗಳಿಗಾಗಿ ಸಂಪಕ೯ ಸಂಖ್ಯೆ – 9483094830