ಮಡಿಕೇರಿ ಫೆ.22 : ಕೊಡಗು ಜಿಲ್ಲೆಯಲ್ಲಿ 12 ಗ್ರಾಮ ಪಂಚಾಯತ್‍ಗಳಲ್ಲಿ (ಗ್ರೇಡ್-2ರಡಿ) ಸಮಗ್ರ ನಾಗರಿಕ ಸೇವಾ ಕೇಂದ್ರ ‘ಗ್ರಾಮ ಒನ್’ ಆರಂಭಿಸಲು ಆಸಕ್ತ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ದೊಡ್ಡಮಳ್ತೆ, ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ, ಸೋಮವಾರಪೇಟೆ ಹೋಬಳಿಯ ಗರ್ವಾಲೆ, ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಕೆದಕಲ್, ಕುಶಾಲನಗರ ಹೋಬಳಿಯ ನಾಲ್ಕೂರು ಶಿರಂಗಾಲ, ವಿರಾಜಪೇಟೆ ತಾಲ್ಲೂಕಿನ ವಿರಾಜಪೇಟೆ ಹೋಬಳಿಯ ಕಾಕೋಟು ಪರಂಬು, ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಹೋಬಳಿಯ ನಿಟ್ಟೂರು, ಹುದಿಕೇರಿ ಹೋಬಳಿಯ ಬಲ್ಯಮಂಡೂರು, ಶ್ರೀಮಂಗಲ ಹೋಬಳಿಯ ಕೆ.ಬಾಡಗ, ಬಾಳೆಲೆ ಹೋಬಳಿಯ ಪೊನ್ನಪ್ಪಸಂತೆ, ಪೊನ್ನಂಪೇಟೆ ಹೋಬಳಿಯ ಬಿ.ಶೆಟ್ಟಿಗೇರಿ ಮತ್ತು ಕಿರುಗೂರು ಈ ಗ್ರಾ.ಪಂ.ಗಳಲ್ಲಿ ಪ್ರಾಂಚೈಸಿಗಳಿಗೆ ಅವಕಾಶ ಇದೆ.
ಆಸಕ್ತ ಪ್ರಾಂಚೈಸಿಗಳು https://www.gramaonebls.com/users/registration ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರಾಜೆಕ್ಟ್ ಮ್ಯಾನೇಜರ್ ಅಥವಾ ಕೋ-ಆರ್ಡಿನೇಟರ್, ಜಿಲ್ಲಾಧಿಕಾರಿ ಅವರ ಕಚೇರಿ (ದೂ.ಸಂ.8861672120/ 8553226664) ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
Breaking News
- *ಕನ್ನಡ ಸಾಹಿತ್ಯ ಭವನ ನಿರ್ಮಾಣ : ಅಗತ್ಯ ಸಹಕಾರಕ್ಕೆ ಕೊಡಗು ಜಿಲ್ಲಾ ಕ.ಸಾ.ಪ ಮನವಿ*
- *ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ‘ಅರೆ ವಿಶೇಷ ಕೊಠಡಿ’ ಉದ್ಘಾಟನೆ : ಎಲ್ಲರಿಗೂ ಎಲ್ಲೆಡೆ ಆರೋಗ್ಯ ಸೌಲಭ್ಯ ದೊರೆಯಲಿ : ಶಾಸಕ ಡಾ.ಮಂತರ್ ಗೌಡ*
- *ಬೃಹತ್ ಭೂಪರಿವರ್ತನೆ, ಭೂವಿಲೇವಾರಿ, ಲೇಔಟ್, ಮೆಗಾ ಟೌನ್ಶಿಪ್ಗೆ ವಿರೋಧ : ಕಡಂಗದಲ್ಲಿ ಸಿಎನ್ಸಿಯಿಂದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ*
- *ಡಿ.8 ರಂದು ಮಡಿಕೇರಿಯಲ್ಲಿ ಸಂಸದರ ನೂತನ ಕಚೇರಿ ಆರಂಭ*
- *ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ : ನೂತನ ಪದಾಧಿಕಾರಿಗಳ ಆಯ್ಕೆ*
- *ಬಿ.ಎಸ್.ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ*
- *ಕರಿಕೆ ಬಿಜೆಪಿ ಶಕ್ತಿ ಕೇಂದ್ರಕ್ಕೆ ಪದಾಧಿಕಾರಿಗಳ ಆಯ್ಕೆ*
- *ವೀರ ಸೇನಾನಿಗಳಿಗೆ ಅಗೌರವ : ಡಿ.6ರಂದು ಮಡಿಕೇರಿಯಲ್ಲಿ ಮಾಜಿ ಸೈನಿಕರಿಂದ ಪ್ರತಿಭಟನೆ*
- *‘ಸ್ವಾಭಿಮಾನಿ’ ಸಮಾವೇಶದಲ್ಲಿ ಕೊಡಗಿನಿಂದ 8 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ*
- *ಚೇಶೈರ್ ಹೋಮ್ ಶಾಲೆಯ ಮುಖ್ಯಶಿಕ್ಷಕ ಶಿವರಾಜ್ ಗೆ ಸನ್ಮಾನ*