
ಮಡಿಕೇರಿ NEWS DESK ಮಾ.10 : ಮಾಯಮುಡಿ ಗ್ರಾ.ಪಂ ಆಡಳಿತಾಧಿಕಾರಿಯಾಗಿ ವಿರಾಜಪೇಟೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಿ.ಪಿ.ಕವಿತಾ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭ ಗ್ರಾ.ಪಂ ಯ ನಿಕಟಪೂರ್ವ ಅಧ್ಯಕ್ಷ ಆಪಟ್ಟೀರ ಟಾಟು ಮೊಣ್ಣಪ್ಪ, ಅಭಿವೃದ್ಧಿ ಅಧಿಕಾರಿ ಹೆಚ್.ಟಿ.ಸುಕೇಶ್, ಕಾರ್ಯದರ್ಶಿ ಬಿ.ಬಿ.ಪೆಮ್ಮಯ್ಯ, ಸಿಬ್ಬಂದಿಗಳಾದ ಸಚಿತ್ ಟಿ.ಜಿ, ಬಾನಂಡ ಪದ್ಮಿನಿ ಸುದನ್ ಹಾಗೂ ಎನ್.ಆರ್.ಗುರು ಹಾಜರಿದ್ದರು. ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪಿ.ಪಿ.ಕವಿತಾ ಅವರು ಮಾಯಮುಡಿ ಗ್ರಾ.ಪಂ ಕುರಿತು ಮಾಹಿತಿ ಪಡೆದರು.









