ಮಡಿಕೇರಿ ಫೆ.23 : ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವಿರಾಜಪೇಟೆ ಸಮೀಪದ ಕಲ್ಲುಬಾಣೆಯಲ್ಲಿ ನಡೆದಿದೆ.
ಕಲ್ಲುಬಾಣೆ ಗ್ರಾಮದ ನಿವಾಸಿ ಬಡಕಡ ಅರುಣ್ ಅವರ ಪುತ್ರ ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ ಆದಿತ್ಯ (ಭಜನ್-18) ನೇಣಿಗೆ ಶರಣಾದ ವಿದ್ಯಾರ್ಥಿ.
ವಿರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.














