ಮಡಿಕೇರಿ ಫೆ.23 : ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮೆಜರ್ ಡಾ. ರಾಘವ ಬಿ ಪ್ರಾಂಶುಪಾಲರು (ಇತಿಹಾಸ ವಿಭಾಗ), ಡಾ. ತಿಪ್ಪೇಸ್ವಾಮಿ ಈ ಆರ್ಥಶಾಸ್ತ್ರ ವಿಭಾಗ, ಡಾ. ಗಾಯತ್ರಿದೇವಿ ವಾಣಿಜ್ಯ ಶಾಸ್ತ್ರವಿಭಾಗ, ಡಾ. ನಾಗರಾಜ್ ಕೆ.ಪಿ ಭೌತಶಾಸ್ತ್ರ ವಿಭಾಗ ಮತ್ತು ಡಾ. ಎಂ.ಪಿ ಕೃಷ್ಣ ಪ್ರಾಣಿಶಾಸ್ತ್ರ ವಿಭಾಗ ಇವರುಗಳಿಗೆ ಸರ್ಕಾರದ ಆದೇಶದಂತೆ ಯುಜಿಸಿ ಮಾನದಂಡಗಳ ಪ್ರಕಾರ ತಮ್ಮ ಸೇವಾ ಅವಧಿಯಲ್ಲಿನ ಸಂಶೋಧನೆ, ಪೀರ್ ರಿವ್ಯೂಡ್ ಜರ್ನಲ್ ಹಾಗೂ ಯುಜಿಸಿ ಅನುಮೋದಿತ, ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ನಿಯತಕಾಲಿಕೆಗಳು ಮತ್ತು ಪತಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಬರೆದ ಪುಸ್ತಕಗಳನ್ನು ಪರಿಗಣಿಸಿ ಪ್ರಾಧ್ಯಾಪಕರನ್ನಾಗಿ ಆಯ್ಕೆ ಮಾಡಲಾಗಿದೆ. ಆಯ್ಕೆ ಸಮಿತಿಯಲ್ಲಿ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳು, ಕುಲಸಚಿವರು ಮತ್ತು ವಿಶ್ವವಿದ್ಯಾನಿಲಯ ಮತ್ತು ಅಂತರ್ ವಿಶ್ವವಿದ್ಯಾನಿಲಯದ ವಿಷಯ ಪರಿಣಿತರು, ಸಂದರ್ಶನ ನಡೆಸಿ ಪ್ರಾಧ್ಯಾಪಕ ಹುದ್ದೆಗೆ ಪದೋನ್ನತ್ತಿಯನ್ನು ನೀಡಿರುತ್ತಾರೆ. ಇಲ್ಲಿಯ ತನಕ ವಿಶ್ವವಿದ್ಯಾನಿಲಯಗಳ ಭೋದಕ ವರ್ಗದವರಿಗೆ ಮಾತ್ರ ಪ್ರಾಧ್ಯಾಪಕರ ಹುದ್ದೆಯನ್ನು ನೀಡುವ ಪದ್ಧತಿ ಇದ್ದು, ಇತ್ತೀಚೆಗೆ ಯುಜಿಸಿ ನಿಯಮಗಳಂತೆ ಕಾಲೇಜಿಗೆ ಪ್ರಾಧ್ಯಾಪಕರನ್ನು ನೇಮಕ ಮಾಡಲಾಗುತ್ತಿದೆ. ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಾಧ್ಯಾಪಕರನ್ನು ನೇಮಕ ಮಾಡಲಾಗಿದ್ದು, ಇದು ಕಾಲೇಜಿನ ಹಿರಿಮೆಯನ್ನು ಹೆಚ್ಚಿಸಿದೆಯಲ್ಲದೆ ಮುಂದೆ ಕಾಲೇಜಿಗೆ ನ್ಯಾಕ್ ನೀಡುವ ಶ್ರೇಣಿಗೆ ಹೆಚ್ಚಿನ ಅಂಕಗಳಿಸುವಲ್ಲಿ ಸಹಕರಿಯಾಗುತ್ತದೆ.
ಮೇಜರ್ ಡಾ. ರಾಘವ ರ ಪ್ರಾಂಶುಪಾಲರು, (ಇತಿಹಾಸ ವಿಭಾಗ)
ಡಾ. ತಿಪ್ಪೇಸ್ವಾಮಿ ಈ, ಅರ್ಥಶಾಸ್ತ್ರ ವಿಭಾಗ
ಡಾ. ಗಾಯತ್ರಿದೇವಿ, ವಾಣಿಜ್ಯ ಶಾಸ್ತ್ರವಿಭಾಗ
ಡಾ. ನಾಗರಾಜ್ ಕೆ.ಪಿ, ಭೌತಶಾಸ್ತ್ರ ವಿಭಾಗ
ಡಾ. ಎಂ.ಪಿ ಕೃಷ್ಣ, ಪ್ರಾಣಿಶಾಸ್ತ್ರ ವಿಭಾಗ