ಮಡಿಕೇರಿ ಫೆ.23 : ದೇಶಭಕ್ತಿಯ ಸಂದೇಶ ಸಾರುವ ವಾಹನ ಜಾಥಾವನ್ನು ಜಿಲ್ಲಾ ರೋಟರಿ ವತಿಯಿಂದ ಆಯೋಜಿಸಲಾಗಿದ್ದು ಈ ಜಾಥಾವು ಇದೇ ಫೆ.25 ರಂದು ಶನಿವಾರ ಮಡಿಕೇರಿಗೆ ಆಗಮಿಸಲಿದೆ.
ರೋಟರಿ ಜಿಲ್ಲಾ ಸಹಾಯಕ ಗವನ೯ರ್ ರತನ್ ತಮ್ಮಯ್ಯ ಈ ಬಗ್ಗೆ ಮಾಹಿತಿ ನೀಡಿದ್ದು, ಶನಿವಾರ ಮಧ್ಯಾಹ್ನ 1.30 ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂನ ಅಮರ್ ಜವಾನ್ ಸ್ಮಾರಕದಲ್ಲಿ ಆಯೋಜಿತ ಸರಳ ಕಾಯ೯ಕ್ರಮದಲ್ಲಿ ರೋಟರಿ ವತಿಯಿಂದ ವಿರಾಜಪೇಟೆಯ ನಿವೖತ್ತ ಮೇಜರ್ ಎಸ್.ವೆಂಕಟಗಿರಿ, ಮಡಿಕೇರಿಯ ಗೌಡಂಡ ಮೇಜರ್ ಸುಬೇದಾರ್ ತಿಮ್ಮಯ್ಯ ಅವರನ್ನು ಈ ಸಂದಭ೯ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ರೋಟರಿ ಜಿಲ್ಲೆ 3181 ವತಿಯಿಂದ ಮಂಗಳೂರಿನಿಂದ ಪ್ರಾರಂಭವಾಗುವ ವಾಹನ ಜಾಥಾವು ಬಿ.ಸಿ.ರೋಡ್. ಪುತ್ತೂರು, ಸುಳ್ಯ ಮಾಗ೯ವಾಗಿ ಮಡಿಕೇರಿಗೆ ಬಂದು ಹುತಾತ್ಮ ಸೈನಿಕರಿಗೆ ಅಮರ್ ಜವಾನ್ ಸ್ಮಾರಕದಲ್ಲಿ ನಮನ ಸಲ್ಲಿಸಿ ಕುಶಾಲನಗರ ಮೂಲಕ ಮೈಸೂರಿಗೆ ತೆರಳಲಿದೆ. ಜಾಥಾ ಸಂದಭ೯ ರೋಟರಿ ಜಿಲ್ಲೆಯ ನಿಯೋಜಿತ ಗವನ೯ರ್ ವಿಕ್ರಂದತ್ತ, ಪ್ರಮುಖರಾದ ಸತೀಶ್ ಬೊಳಾರ್, ರೋಟರಿ ದೇಶಭಕ್ತಿ ಸಂದೇಶ ಸಮಿತಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಜಾಥಾ ಆಯೋಜಕರಾದ ಬೈಕಾಂಪಾಡಿ ರೋಟರಿ ಅಧ್ಯಕ್ಷ ಅಶೋಕ್, ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ವಲಯ ಸೇನಾನಿ ಎನ್.ಡಿ. ಅಚ್ಚಯ್ಯ, ಮಡಿಕೇರಿ ರೋಟರಿ ಕ್ಲಬ್ ಅಧ್ಯಕ್ಷ ಕೆ.ಕಾಯ೯ಪ್ಪ, ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್, ಕ್ಲಬ್ ಗಳ ಕಾಯ೯ದಶಿ೯ಗಳು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದೂ ಪ್ರಕಟಣೆ ತಿಳಿಸಿದೆ.













