ಮಡಿಕೇರಿ ಫೆ.25 : ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ.
ಯುವಕರನ್ನು ಮಾದಕ ವಸ್ತುಗಳಿಂದ ದೂರವಿಡಲು ಕ್ರೀಡೆಗಳು ಸಹಕಾರಿಯಾಗಿದೆ ಎಂದು ಮಡಿಕೇರಿ ಕ್ಷೇತ್ರದ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಹಾಗೂ ಸಮಾಜ ಸೇವಕ ನಾಪಂಡ ಮುತ್ತಪ್ಪ ಅಭಿಪ್ರಾಯಪಟ್ಟರು.
ಕೊಂಡಂಗೇರಿ ಶಾಲಾ ಮೈದಾನದಲ್ಲಿ ಕೊಂಡಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ -12ನೇ ಆವೃತ್ತಿಯ ಪಂದ್ಯಾವಳಿಯನ್ನು ಉದ್ಘಾಟಿಸಿ ನಾಪಂಡ ಮುತ್ತಪ್ಪ ಮಾತನಾಡಿದರು.
ಕ್ರೀಡಾಕೂಟಗಳ ಆಯೋಜನೆಯಿಂದ ಸಮಾಜಕ್ಕೆ ಉತ್ತಮ ಸಂದೇಶ ಸಾರುವಂತಾಗಬೇಕು. ಡ್ರಗ್ಸ್ ಮುಕ್ತ ಅಭಿಯಾನದ ಮೂಲಕ ಕ್ರೀಡಾಕೂಟದಲ್ಲಿ ಕೊಂಡಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಆಯೋಜಿಸಿರುವ ಯುವಕರು ಎಲ್ಲರಿಗೂ ಮಾದರಿಯಾಗಿದ್ದಾರೆ. ದುಶ್ಚಟಗಳಿಂದ ಯುವಕರು ದೂರವಿರಬೇಕು.
ಡ್ರಗ್ಸ್, ಗಾಂಜಾ,ಮುಂತಾದ ಮಾದಕ ವಸ್ತುಗಳ ವಿರುದ್ಧ ಯುವಕರು ಹೋರಾಟ ಮಾಡಿ,ಸಮಾಜದಿಂದ ಮಾದಕ ವಸ್ತುಗಳನ್ನು ನಿರ್ಮೂಲನೆ ಮಾಡಬೇಕೆಂದು ಜೆಡಿಎಸ್ ಮಡಿಕೇರಿ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಹಾಗೂ ಸಮಾಜ ಸೇವಕ ನಾಪಂಡ ಮುತ್ತಪ್ಪ ಕರೆ ನೀಡಿದರು. ಮಾದಕ ವಸ್ತುಗಳ ವಿರುದ್ಧ ಉಪನ್ಯಾಸವನ್ನು ಸುಲೈಮಾನ್ ಮಾಸ್ಟರ್ ನಡೆಸಿದರು.
ಭಾನುವಾರ ಸಂಜೆ ಫೈನಲ್ ಪಂದ್ಯ ನಡೆಯಲಿದ್ದು. 15 ತಂಡಗಳ ನಡುವಿನ ಪಂದ್ಯಾವಳಿಯಲ್ಲಿ,
ಜಂಕ್ಷನ್ ರಾಯಲ್ಸ್, ಗ್ರೀನ್ ಬಾಯ್ಸ್, ಜನ್ನಾ ವಾರಿಯರ್ಸ್ ಹಾಗೂ ಮಾನಿ ಮಿರಾಕಲ್ಸ್ ತಂಡಗಳು ಮುನ್ನಡೆ ಪಡೆದುಕೊಂಡಿದೆ. ಕಾರ್ಯಕ್ರಮವನ್ನು ನಾಸಿರ್ ಸ್ವಾಗತಿಸಿ, ವಂದಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಯೂಸುಫ್ ಪಿ.ವೈ,ಅಬ್ದುಲ್ಲಾ (ಚಿಲ್ಲೂ), ಆಸಿಫ್ (ಆಪು), ಸಾಧಿಕ್ ಸಲೀಂ, ಜೆಡಿಎಸ್ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಜಾಸೀರ್ ಮೂರ್ನಾಡು,ಸಾದಿಕ್,ಸಲೀಂ, ದಾನಿಗಳಾದ ನಿಶು,ಕೌಶಿ, ಹಾಶಿರ್,ಅರಾಫತ್,ರಾಶಿದ್ ಕೊಯಂಬತ್ತೂರು ಇದ್ದರು.