ಮೂರ್ನಾಡು ಫೆ.27 : ಬಂಟರ ಸಂಘದ ಏಳಿಗೆಗಾಗಿ ಶ್ರಮಿಸಲು ಬದ್ಧನಾಗಿದ್ದು, ಒಳ್ಳೆಯ ಕಾರ್ಯದ ವಿಚಾರದಲ್ಲಿ ಯಾರೂ ತೊಂದರೆ ಕೊಡಬಾರದು ಎಂದು ಜಿಲ್ಲಾಧ್ಯಕ್ಷ ಬಿ.ಡಿ. ಜಗದೀಶ್ ರೈ ಅಭಿಪ್ರಾಯಪಟ್ಟರು.
ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ಎರಡು ದಿನ ಕಾಲ ಕಾಲೇಜು ಮೈದಾನದಲ್ಲಿ ನಡೆದ ‘ಸ್ವಜಾತಿ ಬಂಧುಗಳ ಸಮ್ಮಿಲನ-2023’ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಂಟರ ಸಂಘ ಹಾಗೂ ಸಮುದಾಯದ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಾಕಿಕೊಕೊಳ್ಳಲಾಗಿದೆ. ಮುಂದಿನ ದಿನದಲ್ಲಿ ಒಂದೊಂದಾಗಿ ಕಾರ್ಯರೂಪಕ್ಕೆ ತರಲಾಗುವುದು. ಮುಖ್ಯವಾಗಿ ಬಂಟರ ಭವನ ನಿರ್ಮಾಣ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಬೇಕೆಂಬ ಇರಾದೆ ಇದೆ. ಯಾರು ಕೂಡಾ ವಿನಾ ಕಾರಣ ಅಡ್ಡಗಾಲು ಹಾಕಬಾರದೆಂದು ಮನವಿ ಮಾಡಿದರು.
ಜಿಲ್ಲಾ ಬಂಟರ ಶಾಂತಿ ಧಾಮಕ್ಕೆ ಸುಂದರ ರೂಪ ನೀಡಲಾಗಿದೆ. ಮುಂದೆ ಪ್ರತಿಭಾ ಪುರಸ್ಕಾರ, ಸಮುದಾಯದ ಸಾಧಕರನ್ನು ಗುರುತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಸಮುದಾಯದವರ ಏಳಿಗೆಗಾಗಿ ಬಂಟರ ಸಂಘ ಸದಾ ಬೆಂಬಲವಾಗಿರುತ್ತದೆ. ಎಲ್ಲಾ ಹೋಬಳಿಯಲ್ಲೂ ಸಂಘದ ಘಟಕ ಆರಂಭಿಸಿ, ಕಾರ್ಯಚಟುವಟಿಕೆಯಿಂದ ಕೂಡಿರುವಂತೆ ಕಾಳಜಿ ವಹಿಸಬೇಕು. ಸಮುದಾಯದ ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಕಾರ್ಯಕ್ರಮ ರೂಪಿಸಬೇಕೆಂದು ಕಿವಿಮಾತು ಹೇಳಿದರು.
ಸನ್ಮಾನ : ವಿವಿಧ ಕ್ಷೇತ್ರದ ಸಾಧಕರಾದ ಡಾ. ಹೇಮಂತ್ ಕುಮಾರ್, ಬಾಬ ಅರುಣ್ ರೈ, ಬಿ.ಕೆ. ಸುರೇಶ್ ರೈ, ಸುಮತಿ ಶೆಟ್ಟಿ, ಜಿತೇಂದ್ರ ರೈ, ಜಯಂತಿ ಲವ ರೈ, ಪ್ರೇಮಲತಾ ಶೆಡ್ತಿ, ಕಿಶೋರ್ ರೈ ಕತ್ತಲೆಕಾಡು ಅವರನ್ನು ಸನ್ಮಾನಿಸಲಾಯಿತು.
ಮೂರ್ನಾಡು ಹೋಬಳಿ ಘಟಕ ಅಧ್ಯಕ್ಷ ಬಿ.ಕೆ. ಚಂದ್ರಶೇಖರ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಿ.ಬಿ. ಐತಪ್ಪ ರೈ, ರವೀಂದ್ರ ವಿ.ರೈ, ಅಶ್ವಿನಿ ಪುರುಷೋತ್ತಮ ರೈ, ಸುದೀಶ್ ರೈ, ರಮೇಶ್ ರೈ, ಜನಾರ್ದನ ಶೆಟ್ಟಿ, ದುಷ್ಯಂತ್ ರೈ, ರತ್ನಾಕರ ರೈ, ವಸಂತ ರೈ, ಬಿ.ಸಿ. ಹರೀಶ್ ರೈ, ಗಿರೀಶ್ ರೈ, ಸೌಮ್ಯ ಶೆಟ್ಟಿ, ಶರತ್ ಶೆಟ್ಟಿ, ಜಯಂತಿ ರೈ ವೇದಿಕೆಯಲ್ಲಿದ್ದರು. ಅಶ್ವತ್ಥ್ ರೈ ಸ್ವಾಗತಿಸಿದರು. ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ : ಮಂಗಳೂರಿನ ಮಸ್ಕಿರಿ ಕುಡ್ಲ ತಂಡದ ಕಾಮಿಡಿ ಕಚಗುಳಿ ವಿಶೇಷ ಆಕರ್ಷಣೆಯಾಗಿ ರಂಜಿಸಿದೆ. ಖ್ಯಾತ ಕಲಾವಿದರಾದ ದೀಪಕ್ ರೈ ಪಾಣಾಜೆ, ಜೆ.ಪಿ. ತೂಮಿನಾಡು, ಪ್ರಕಾಶ್ ತೂಮಿನಾಡು, ರಾಜೇಶ್ ಮುಗುಳಿ ಮನೋಜ್ಞ ಅಭಿನಯದ ಮೂಲಕ ನೆರೆದಿದ್ದವರನ್ನು ನಗೆಗಡಲಿನಲ್ಲಿ ತೇಲಿಸಿದರು. ಇದರೊಂದಿಗೆ ಸಮಾಜದ ಯುವ ಪ್ರತಿಭೆಗಳು ನೃತ್ಯ, ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*