‘ಸ್ವಜಾತಿ ಬಂಧುಗಳ ಸಮ್ಮಿಲನ-2023’ ಕ್ರಿಕೆಟ್ ಪಂದ್ಯಾವಳಿ : ಚಕ್ರವರ್ತಿ ಬಂಟ್ಸ್ ಚಾಂಪಿಯನ್ಸ್

ಮೂರ್ನಾಡು ಫೆ.27 : ಮೂರ್ನಾಡು ಹೋಬಳಿ ಬಂಟರ ಸಂಘದ ವತಿಯಿಂದ ನಡೆದ ‘ಸ್ವಜಾತಿ ಬಂಧುಗಳ ಸಮ್ಮಿಲನ-2023’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೇರಿಯ ಚಕ್ರವರ್ತಿ ಬಂಟ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ನಗರದ ಕಾಲೇಜು ಮೈದಾನದಲ್ಲಿ ನಡೆದ ಪೈನಲ್ ಪಂದ್ಯದಲ್ಲಿ ಎನ್.ಪಿ. ಬಂಟ್ ವಾರಿಯರ್ಸ್ ಕುಂಜಿಲಗೇರಿ ತಂಡವನ್ನು ಮಣಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚಕ್ರವರ್ತಿ ತಂಡ ನಿಗದಿತ 6 ಓವರ್‍ಗೆ ನಾಲ್ಕು ವಿಕೆಟ್ ಕಳೆದುಕೊಂಡು 59 ರನ್ ಗಳಿಸಿತು.
60 ರನ್ ಗುರಿ ಬೆನ್ನತ್ತಿದ ಎನ್.ಪಿ. ಬಂಟ್ ವಾರಿಯರ್ಸ್ ಕುಂಜಿಲಗೇರಿ ತಂಡ 6 ಓವರ್‍ಗೆ 32 ರನ್‍ಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡು ರನ್ನರಪ್ ಪ್ರಶಸ್ತಿಗೆ ತೃಪ್ತಿಪಟ್ಟಿತು.
ಸೆಮಿ ಫೈನಲ್‍ನಲ್ಲಿ ಟೀಂ ವಿರಾಟ್ ತಂಡವನ್ನು 25 ರನ್ ಅಂತರದಿಂದ ಮಣಿಸಿ ಚಕ್ರವರ್ತಿ ಬಂಟ್ಸ್ ಮಡಿಕೇರಿ ಫೈನಲ್‍ಗೆ ಅರ್ಹತೆ ಪಡೆಯಿತು. ಮತ್ತೊಂದು ಸೆಮಿಫೈನಲ್‍ನಲ್ಲಿ ಯಂಗ್ ಬಂಟ್ ಪ್ಯಾಂಥರ್ಸ್ ತಂಡವನ್ನು 6 ವಿಕೆಟ್‍ನಿಂದ ಸೋಲಿಸಿ ಎನ್.ಪಿ. ಬಂಟ್ ವಾರಿಯರ್ಸ್ ಅಂತಿಮ ಪಂದ್ಯಕ್ಕೆ ಅವಕಾಶ ಗಿಟ್ಟಿಸಿತು.
ಅಂತಿಮ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಚಕ್ರವರ್ತಿ ಬಂಟ್ಸ್ ತಂಡದ ನಿಖಿಲ್ ಆಳ್ವ ಪಂಡೆದುಕೊಂಡರೆ, ಪಂದ್ಯಾವಳಿ ಶ್ರೇಷ್ಠ ಆಟಗಾರನಾಗಿ ಯಂಗ್ ಬಂಟ್ ಪ್ಯಾಂಥರ್ಸ್ ಕೈಕೇರಿ ತಂಡದ ಗಗನ್ ಆಳ್ವ ಪಾಲಾಯಿತು.
ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಮಲ್ನಾಡ್ ಬಂಟ್ಸ್ ವಿರಾಜಪೇಟೆ(ಪ್ರ), ಗಂಗನ ಕುಟುಂಬ ಬೆಟ್ಟಗೇರಿ(ದ್ವಿ) ಬಹುಮಾನ ಗಳಿಸಿತು.
ಮಹಿಳೆಯರ ವಿಭಾಗದ ಥ್ರೋಬಾಲ್‍ನಲ್ಲಿ ಬಂಟ್ಸ್ ವಾರಿಯರ್ಸ್ ಮೂರ್ನಾಡು(ಪ್ರ), ಎನ್.ಪಿ. ಬಂಟ್ಸ್ ಕುಂಜಿಲಗೇರಿ(ದ್ವಿ), ಹಗ್ಗಜಗ್ಗಾಟದಲ್ಲಿ ಮಡಿಕೇರಿ ನಗರ ಮಹಿಳಾ ಘಟಕ(ಪ್ರ), ಬಂಟ್ಸ್ ವಾರಿಯರ್ಸ್ ಮೂರ್ನಾಡು(ದ್ವಿ), ನಿಂಬೆ ಚಮಚ ಓಟದಲ್ಲಿ ಬಿ.ಜೆ. ಸುಮಿತ್ರ ರೈ ಮೂರ್ನಾಡು(ಪ್ರ), ಚಿತ್ರ ರೈ(ದ್ವಿ).
1-4ನೆ ತರಗತಿ ಮಕ್ಕಳ ವಿಭಾಗದ ಚಕ್ಕುಲಿ ಕಚ್ಚುವ ಸ್ಪರ್ಧೆಯಲ್ಲಿ ವಿಶಿಷ್ಠ್ ದಿನೇಶ್ ರೈ(ಪ್ರ), ಇತಿಶ್ರೀ ಸಚಿನ್ ರೈ(ದ್ವಿ). ಅಂಗನವಾಡಿ ವಿಭಾಗದ ಕಾಳುಹೆಕ್ಕುವ ಸ್ಪರ್ಧೆಯಲ್ಲಿ ಕೃನಾಲ್ ಶೆಟ್ಟಿ(ಪ್ರ), ಗಾಯನ್ ಶೆಟ್ಟಿ(ದ್ವಿ). 5-7ನೆ ತರಗತಿ ವಿಭಾಗದ ಪಿರಮಿಡ್ ರಚನೆ(ಬಾಲಕರು), ಅನ್ಶುಲ್ ಜಯರಾಮ್ ರೈ(ಪ್ರ), ರೋಹನ್ ರಾಧಕೃಷ್ಣ ರೈ(ದ್ವಿ). ಬಾಲಕಿಯರ ವಿಭಾಗದಲ್ಲಿ ಅಕ್ಷತಾ ಅಶ್ವತ್ಥ್ ರೈ(ಪ್ರ), ತನ್ಯ ಸತೀಶ್ ರೈ(ದ್ವಿ).
ಪ್ರೌಢಶಾಲೆ ಬಾಲಕರ ವಿಭಾಗದ 100 ಮೀ.ಓಟದಲ್ಲಿ ದಿಗಂತ್ ಅನಿಲ್ ಕುಮಾರ್ ರೈ(ಪ್ರ), ಅಖಿಲ್ ಜಯರಾಮ್ ರೈ(ದ್ವಿ), ಬಾಲಕಿಯರ ವಿಭಾಗದಲ್ಲಿ ರೋಶಿನಿ ಅಶೋಕ್ ಆಳ್ವ(ಪ್ರ), ಸೋನಿಕಾ ಸುಮತಿ ಶೆಟ್ಟಿ(ದ್ವಿ).
