ಸೋಮವಾರಪೇಟೆ ಫೆ.27 : ಆಕಸ್ಮಿಕವಾಗಿ ಕಾಫಿ ತೋಟಕ್ಕೆ ಬೆಂಕಿ ಬಿದ್ದು ಹಾನಿಯಾಗಿರುವ ಘಟನೆ ಕಿರಗಂದೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಬಡಗಿಮನೆ ಬಿ.ಎನ್.ಚಂದ್ರ, ಗಿರಿಜಮ್ಮ ಎಂಬವರ ಕಾಫಿ ತೋಟಕ್ಕೆ ಬೆಂಕಿ ಬಿದ್ದಿದೆ. ಗ್ರಾಮಸ್ಥರು ಬೆಂಕಿ ಆರಿಸಿದ್ದಾರೆ. ಫಸಲು ಕೊಡುತ್ತಿದ್ದ 200 ಕಾಫಿ ಗಿಡಗಳು, 30 ಮೆಣಸಿನ ಬಳ್ಳಿ, ಹತ್ತು ಸಿಲ್ವರ್ ಮರಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ಅವಗಡಕ್ಕೆ ಕಾರಣ ತಿಳಿದುಬಂದಿಲ್ಲ. ತೋಟಗಾರಿಕಾ ಇಲಾಖೆ ಮತ್ತು ಕಂದಾಯ ಇಲಾಖೆಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.










