ಸೋಮವಾರಪೇಟೆ ಫೆ.28 : ದೊಡ್ಡಮಳ್ತೆ ಫಾರ್ಮರ್ಸ್ ಸ್ಪೋರ್ಟ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬ್ಯಾಂಡ್ ಸೆಟ್ ನ್ನು ಕೊಡುಗೆಯಾಗಿ ನೀಡಲಾಯಿತು.
ಶಾಲಾ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಜಿ.ಪಿ.ಸುನೀಲ್ ಬ್ಯಾಂಡ್ ಸೆಟ್ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಅನುಭವಿ ಶಿಕ್ಷಕರು ಇರುತ್ತಾರೆ. ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತಿವೆ. ಹಳ್ಳಿಗಾಡಿನ ಕ್ರೀಡಾ ಪ್ರತಿಭೆಗಳು ಗ್ರಾಮೀಣ ಶಾಲೆಯಲ್ಲಿ ಇದ್ದು, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು, ಪೋಷಕರು, ನಾವೆಲ್ಲರೂ ಮಾಡಬೇಕು ಎಂದರು.
ಈ ಸಂದರ್ಭ ಅಸೋಸಿಯೇಷನ್ ಕಾರ್ಯದರ್ಶಿ ಎಂ.ಪಿ.ರವಿ, ಎಸ್‍ಡಿಎಂಸಿ ಅಧ್ಯಕ್ಷ ಸತೀಶ್, ಗ್ರಾ.ಪಂ ಸದಸ್ಯ ರುದ್ರಪ್ಪ, ಮುಖ್ಯಶಿಕ್ಷಕಿ ತಂಗಮ್ಮ, ಶಾಲಾ ಜಾಗದ ದಾನಿಗಳಾದ ಶಾಂತಪ್ಪ, ಮಾಜಿ ಸೈನಿಕ ಶಾಂತರಾಜು, ದೈಹಿಕ ಶಿಕ್ಷಣ ಶಿಕ್ಷಕ ಶಿವಶಂಕರ್, ಅಸೋಸಿಯೇಷನ್ ಸದಸ್ಯರಾದ ಎಚ್.ಕೆ.ಪೃಥ್ವಿ, ಡಿ.ಎಸ್.ಸುಬ್ರಮಣಿ, ಎಂ.ಬಿ.ಚಂದ್ರಶೇಖರ್, ಎಚ್.ಕೆ.ಗಿರೀಶ್, ಚಿದಾನಂದ ಇದ್ದರು.
ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು ನಡೆಯಿತು.