ನಾಪೋಕ್ಲು ಫೆ.28 : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕುರುಚಲು ಕಾಡು ಹಾಗೂ ಗಿಡಗಳು ಭಸ್ಮವಾಗಿವೆ.
ಸುಮಾರು ಮೂರುವರೆ (3.5)ಎಕ್ರೆ ವ್ಯಾಪ್ತಿಯ ಕಾಲೇಜಿನ ಆವರಣ ಬೆಂಕಿಗೆ ಆಹುತಿಯಾಗಿದ್ದು, ನಷ್ಟ ಸಂಭವಿಸಿದೆ. ಅಗ್ನಿಶಾಮಕ ದಳ ಹಾಗೂ ಸಾರ್ವಜನಿಕರ ನೆರವಿನೊಂದಿಗೆ ವ್ಯಾಪಕವಾಗಿ ಹಬ್ಬಿದ ಬೆಂಕಿಯನ್ನು ಸಹಬಂದಿಗೆ ತರಲಾಯಿತು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಕಾವೇರಿ ಮಾತನಾಡಿ, ಕಾಲೇಜಿನ ಆವರಣದಲ್ಲಿ ಮೊಬಿಯಸ್ ಕಂಪನಿಯ ಸಹಯೋಗದೊಂದಿಗೆ ನೂರಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ನೆಟ್ಟು ಸಂರಕ್ಷಿಸಲಾಗಿತ್ತು. ಆದರೆ, ಕುರುಚಲು ಕಾಡಿನೊಂದಿಗೆ ಹಣ್ಣಿನ ಗಿಡಗಳು ಅಗ್ನಿ ಗಾಹುತಿಯಾಗಿದ್ದು, ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ