ಐಗೂರಿನಲ್ಲಿ ಹುಲ್ಲಿನ ಮೆದೆಗೆ ಕಾಡಾನೆಗಳು ದಾಳಿ
28/02/2023

ಸೋಮವಾರಪೇಟೆ ಫೆ.28 : ಭತ್ತದ ಫಸಲು ತುಂಬಿದ ಹುಲ್ಲಿನ ಮೆದೆಗೆ ಕಾಡಾನೆಗಳು ದಾಳಿ ನಾಶಪಡಿಸಿರುವ ಘಟನೆ ಐಗೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷಿಕ ಕೆ.ಪಿ.ದಿನೇಶ್ ಎಂಬವರು ಗದ್ದೆಯಲ್ಲಿ ಸಂಗ್ರಹಿಸಿಟ್ಟ ಹುಲ್ಲನ್ನು ನಾಶಪಡಿಸಿದ್ದು, ರೂ. 1 ಲಕ್ಷ ನಷ್ಟ ಉಂಟಾಗಿದೆ ಎಂದು ಕೆ.ಪಿ.ದಿನೇಶ್ ಅರಣ್ಯ ಇಲಾಖೆಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಸ್ಥಳಕ್ಕೆ ಡಿಆರ್‍ಎಫ್‍ಒ ಜಗದೀಶ್ ಮತ್ತು ಅರಣ್ಯ ರಕ್ಷಕ ಭರಮಪ್ಪ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
