ವಿರಾಜಪೇಟೆ ಫೆ.28 : ಸುಮಾರು 300 ವರ್ಷಗಳ ಪುರಾತನವಾದ ವಿರಾಜಪೇಟೆ ತಾಲ್ಲೂಕಿನ ಕದನೂರು ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಚೈತನ್ಯ ಮಠಪುರ ಆದಿ ಮುತ್ತಪ್ಪನ್ ದೇವಾಲಯದ ವಾರ್ಷಿಕ ತೆರೆ ಮಹೋತ್ಸವವು ಮಾ.1 ರಂದು ಜರುಗಲಿದೆ.
ಅಂದು ಬೆಳಿಗ್ಗೆ 6-30ಕ್ಕೆ ಗಣಪತಿ ಹೋಮ, 9 ಗಂಟೆಗೆ ಧ್ವಜಾರೋಹಣ, 10.30 ಕ್ಕೆ ಪೈಂಗುತ್ತಿ ನೆರವೇಲಿದೆ.
ಸಂಜೆ 6.30ಕ್ಕೆ ಶ್ರೀ ಮುತ್ತಪ್ಪನ್ ವೆಳ್ಳಾಟಂ,7-30 ಗಂಟೆಗೆ ಶ್ರೀ ಗುಳಿಗನ್ ವೆಳ್ಖಾಟಂ ನಡೆಯಲಿದೆ. ದೇವಾಲಯದ ತೆರೆ ಮಹೋತ್ಸವಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಮುಖ್ಯಸ್ಥರು ಮತ್ತು ಉತ್ಸವ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.