ಮಡಿಕೇರಿ ಮಾ.1 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಮಾ.4 ಮತ್ತು 5 ರಂದು ಗೋಣಿಕೊಪ್ಪಲಿನಲ್ಲಿ ನಡೆಸುತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಣಿಕೊಪ್ಪಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸುವ ಸಾಹಿತಿ ಐ.ಮಾ.ಮುತ್ತಣ್ಣ ವೇದಿಕೆಯಲ್ಲಿ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾದ ಜಿಲ್ಲೆಯ ಹಿರಿಯ ಸಾಹಿತಿ ಮೈಸೂರಿನ ಯುವರಾಜ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಡಾ.ಎಂ.ಪಿ.ರೇಖಾ ನಡೆಸಿ ಕೊಡಲಿದ್ದಾರೆ.
ಮಾ.4 ರಂದು ಬೆಳಿಗ್ಗೆ 8 ಗಂಟೆಗೆ ಕನ್ನಡ ಧ್ವಜವನ್ನು ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ರಾಷ್ಟ್ರಧ್ವಜವನ್ನು ಗೋಣಿಕೊಪ್ಪಲು ಗ್ರಾ.ಪಂ ಅಧ್ಯಕ್ಷರಾದ ಮನ್ನಕ್ಕಮನೆ ಸೌಮ್ಯ ಬಾಲು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ.
ನಾಡಿಗೆ ಸೇವೆ ಸಲ್ಲಿಸಿ ಕಣ್ಮರೆಯಾದ ಹಿರಿಯ 10 ಸಾಧಕರನ್ನು ಗುರುತಿಸಿ ಅವರ ನೆನಪಿನ ಧ್ವನಿಗಳನ್ನು ನಿರ್ಮಿಸಲಾಗಿದ್ದು, ಬೆಳಿಗ್ಗೆ 8.30 ಉದ್ಘಾಟನೆಗೊಳ್ಳಲಿದೆ ಎಂದರು.
ಜಮ್ಮಡ ಕರುಂಬಯ್ಯ ನೆನಪಿನ ದ್ವಾರವನ್ನು ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಉದ್ಘಾಟದಲ್ಲಿದ್ದು, ಕೊಳ್ಳಿಮಾಡ ಸಿ ಮಂದಣ್ಣ ನೆನಪಿನ ದ್ವಾರವನ್ನು ಕುಲ್ಲಚಂಡ ಬೋಪಣ್ಣ ಉದ್ಘಾಟಿಸಲಿದ್ದಾರೆ. ಮಲ್ಲಂಡಕ್ಕೆ ನಂಜಪ್ಪ ಅವರ ನೆನಪಿನ ದ್ವಾರವನ್ನು ಕಡೇಮಾಡ ಸುನಿಲ್ ಮಾದಪ್ಪ ಉದ್ಘಾಟಿಸಲಿದ್ದಾರೆ. ವಾಟೀರಿರ ಅಯ್ಯಪ್ಪ ಅವರ ನೆನಪಿನ ದ್ವಾರವನ್ನು ಕಿರಿಯಮಾಡ ಅರುಣ್ ಪೂಣಚ್ಚ ಉದ್ಘಾಟಿಸಲಿದ್ದಾರೆ. ಅಜ್ಜಿಕುಟ್ಟಿರ ಶಾಂತು ಅಪ್ಪಯ್ಯ ನೆನಪಿನ ದ್ವಾರವನ್ನು ಚಪ್ಪುಡೀರ ಪ್ರೇಮ್ ಗಣಪತಿ ಉದ್ಘಾಟಿಸಲಿದ್ದಾರೆ. ಮನೆಯಪಂಡ ಡಬ್ಲ್ಯೂ ಅಯ್ಯಪ್ಪ ಅವರ ನೆನಪಿನ ದ್ವಾರವನ್ನು ಎಂ.ಎನ್ ಪ್ರಕಾಶ್ ಉದ್ಘಾಟಿಸಲಿದ್ದಾರೆ. ಶ್ರೀ ಜಗದಾತ್ಮಾನಂದ ಸ್ವಾಮೀಜಿ ಮಹಾರಾಜ್ ಅವರ ನೆನಪಿನ ದ್ವಾರವನ್ನು ಎಂ.ಜಿ ಮೋಹನ್ ಉದ್ಘಾಟಿಸಲಿದ್ದಾರೆ. ಜಿ.ಟಿ ಪುಟ್ಟತಾಯಮ್ಮ (ಮೈಸೂರಮ್ಮ)ಅವರ ನೆನಪಿನ ದ್ವಾರವನ್ನು ಶ್ರೀ ಮನೆಯಪಂಡ ಸೋಮಣ್ಣ ಉದ್ಘಾಟಿಸಲಿದ್ದಾರೆ. ಎಂ.ಜಿ.ಪದ್ಮನಾಭ ಕಾಮತ್ ನೆನಪಿನ ದ್ವಾರವನ್ನು ಎಸ್.ಎಲ್.ಶಿವಣ್ಣ ಉದ್ಘಾಟಿಸಲಿದ್ದಾರೆ. ಸಿ.ಟಿ ದೇವಯ್ಯ (ತಮ್ಮು) ಅವರನ್ನು ಜಪ್ಪೆ ಕೋಡಿ ರಾಜ ಉತ್ತಪ್ಪ ಉದ್ಘಾಟಿಸಲ್ಲಿದ್ದಾರೆ.
ಬೆಳಿಗ್ಗೆ 8.45 ಕ್ಕೆ ಗೋಣಿಕೊಪ್ಪಲಿನ ಪಾಲಿಬೆಟ್ಟ ರಸ್ತೆ ತಿರುವಿನಿಂದ ಮುಖ್ಯ ರಸ್ತೆಗಾಗಿ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಿರುವ ಡಾ. ಪಿ.ಎಂ ನಾಣಮ್ಮಯ್ಯ ಸಭಾಂಗಣದವರೆಗೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಡೆಯಲಿದ್ದು,ಮೆರವಣಿಗೆಯನ್ನು ಗುಮ್ಮಟ್ಟಿದ ಕಿರಣ್ ಗಣಪತಿ ಉದ್ಘಾಟಿಸಲಿದ್ದಾರೆ.
ಮೆರವಣಿಗೆಯಲ್ಲಿ ಮಂಗಳವಾದ್ಯ ಚಂಡೆ, ಕಳಸ ಹೊತ್ತ ಮಹಿಳೆಯರು, ಶಬ್ದ ಚಿತ್ರಗಳು, ಗೊಂಬೆಗಳು, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಕೊಡಗಿನ ವಾಲಗ ಬ್ಯಾಂಡ್ ಸೆಟ್, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ ಮಹಿಳಾ ಒಕ್ಕೂಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ಅಂಗನವಾಡಿ ಸಂಘಟನೆ, ಸ್ತ್ರೀ ಶಕ್ತಿ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಶಿಕ್ಷಕರುಗಳು, ಸಂಘ ಸಂಸ್ಥೆಗಳ ಮತ್ತು ಸಮಾಜಗಳ ಪ್ರತಿನಿಧಿಗಳು ಆಟೋ ಮತ್ತು ವಾಹನ ಚಾಲಕ ಸಂಘದವರು, ಎನ್ ಸಿ ಸಿ ಮತ್ತು ಸ್ಕೌಟ್ ಅಂಡ್ ಗೇಟ್ಸ್ ತಂಡ ಇತ್ಯಾದಿಗಳೊಂದಿಗೆ ಸುಮಾರು 3000 ಕನ್ನಡ ಅಭಿಮಾನಿಗಳ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮೀದೇರಿರ ನವೀನ್ ಭಾಗವಹಿಸಲಿದ್ದಾರೆ. ವಿವಿಧ ಕಲಾತಂಡಗಳನ್ನು ಹಾತೂರು ಪಂಚಾಯತಿ ಅಧ್ಯಕ್ಷ ಗುಮ್ಮಟ್ಟಿದ ದರ್ಶನ್ ನಂಜಪ್ಪ, ಪೊನ್ನಂಪೇಟೆ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್, ದೇವರಪುರ ಗ್ರಾ.ಪಂ ಅಧ್ಯಕ್ಷ ಪಿ.ಜಿ.ಶಾರದಾ, ತಿತಿಮತಿ ಗ್ರಾ.ಪಂ ಅಧ್ಯಕ್ಷ ಕೆ.ಸರಸ್ವತಿ, ಪೊನ್ನಂಪೇಟೆ ಗ್ರಾ.ಪಂ ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ, ಗೋಣಿಕೊಪ್ಪಲು ಗ್ರಾ.ಪಂ ಉಪಾಧ್ಯಕ್ಷೆ ಪಿ.ಸವಿತಾ ಉದ್ಘಾಟಿಸಲಿದ್ದಾರೆ.
ಅಜ್ಜಿಕುಟ್ಟಿರ ಎ.ಅಪ್ಪಣ್ಣ ಮಹಾದ್ವಾರವನ್ನು ಸಿ.ಕೆ.ಬೋಪಣ್ಣ ಉದ್ಘಾಟಿಸಲಿದ್ದು, ಮುಲ್ಲೆಂಗಡ ಬೇಬಿ ಚೋಂದಮ್ಮ ಪುಸ್ತಕ ಮಳಿಗೆಯನ್ನು ಶ್ರೀಶೈಲ ಬಿಳಗಿ ಉದ್ಘಾಟಿಸಲಿದ್ದಾರೆ. ಆಲಿರ ಆಲಿ ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನ ಮಳಿಗೆಯನ್ನು ಆಲಿರ ಎರ್ಮು ಹಾಜಿ ಉದ್ಘಾಟಿಸಲ್ಲಿದ್ದಾರೆ. ಕೇಚಮಾಡಸುಬ್ಬಮ್ಮ ಸ್ತ್ರೀಶಕ್ತಿ ಮಹಿಳಾ ಮಳಿಗೆಯನ್ನು ಎಸ್.ಎಂ.ರಜನಿ ಉದ್ಘಾಟಿಸಲಿದ್ದಾರೆ. ಡಾ. ಪಿ.ಎಂ.ನಾಣಮ್ಮಯ್ಯ ಸಭಾಂಗಣವನ್ನು ಪೊನ್ನಿಮಾಡ ಸುರೇಶ್ ಉದ್ಘಾಟಿಸಲಿದ್ದಾರೆ. ಸಾಹಿತಿ ಐ.ಮಾ ಮುತ್ತಣ್ಣ ವೇದಿಕೆಯನ್ನು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ 10.15ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಮ್ಮೇಳನದ ಸರ್ವಾಧ್ಯಕ್ಷರಾದ ಎಂ.ಪಿ.ರೇಖಾ ವಹಿಸಿಕೊಳ್ಳಲಿದ್ದಾರೆ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಕಾರ್ಯಕ್ರಮವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಉದ್ಘಾಟಿಸಲಿದ್ದಾರೆ.
ಸಮ್ಮೇಳನದ ನೆನಪಿಗಾಗಿ ಹೊರ ತರುವ ಸ್ಮರಣ ಸಂಚಿಕೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಬಿಡುಗಡೆಗೊಳಿಸಲಿದ್ದಾರೆ.
ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿರುವ ಜಯಪ್ರಕಾಶ್ ಪುತ್ತೂರು ರವರ ಬದುಕಲು ಬಿಡಿ ಪ್ಲೀಸ್, ಶರ್ಮಿಳಾ ರಮೇಶ್ ರವರ ಲಹರಿ ಲಲಿತ ಪ್ರಬಂಧ. ಕಿಗ್ಗಾಲು ಗಿರೀಶ್ ರವರ ಅನಿರೀಕ್ಷಿತ ತಿರುವುಗಳು ಕಾದಂಬರಿ, ಕೃಪಾ ದೇವರಾಜ್ ರವರ ಚೌ ಚೌ ಬಾತ್, ರೇ||. ಪಾ ಫ್ರಾನ್ಸಿಸ್ ಚಿರಕ್ಕಲ್ ರವರ ಗ್ರಾಮೀಣ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣದ ಪಾತ್ರ ಪುಸ್ತಕಗಳನ್ನು ವಿಧಾನಸಭಾ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಬಿಡುಗಡೆಗೊಳಿಸಲಿದ್ದಾರೆ.
ನಂತರ ಉದ್ಯೋನ್ಮುಖ ಕಲಾವಿದರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಹಿರಿಯ ಕಲಾವಿದೆ ನಿರ್ಮಲ ಬೋಪಣ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯೋಪಾಧ್ಯಾಯ ಹೆಚ್.ಎನ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೊಡಗು ಭಾಷಾ ವೈವಿಧ್ಯತೆ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಡಾ. ಬೆಸೂರ್ ಮೋಹನ್ ಪಾಳೆಗಾರ ವಹಿಸಲಿದ್ದಾರೆ. ಗೋಷ್ಠಿಯಲ್ಲಿ ಕೊಡಗು ಮತ್ತು ಕನ್ನಡ ಸಾಹಿತ್ಯ ಕುರಿತು ಮೇಜರ್ ಡಾ.ಕುಶ್ವಂತ್ ಕೋಳಿಬೈಲು, ಕೊಡವ ಬಾಷ್ಯ ಸಾಹಿತ್ಯ ಕುರಿತು ಚಮ್ಮಟ್ಟಿರ ಪ್ರವೀಣ ಉತ್ತಪ್ಪ, ಅರೆ ಭಾಷೆ ಸಾಹಿತ್ಯ ಕುರಿತು ಸುಬ್ರಾಯ ಸಂಪಾಜೆ, ತುಳು ಭಾಷೆ ಸಾಹಿತ್ಯ ಕುರಿತು ಪ್ರತಿಮಾ ರೈ, ಬ್ಯಾರಿ ಭಾಷಾ ಸಾಹಿತ್ಯ ಕುರಿತು ಎಸ್.ಐ.ಮುನೀರ್ ಅಹ್ಮದ್ ವಿಚಾರ ಮಂಡಿಸಲಿದ್ದಾರೆ.
ನಂತರ ನಡೆಯಲಿರುವ ಸಂಕೀರ್ಣ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ವಕೀಲರಾದ ಹೆಚ್.ಎಸ್.ಚಂದ್ರಮೌಳಿ ವಹಿಸಲಿದ್ದು, ವಿ.ಪಿ ಶಶಿಧರ್ ಆಶಯ ನುಡಿಯಾಡಲಿದ್ದಾರೆ. “ಕಾನೂನಿನಲ್ಲಿ ಕನ್ನಡ ಬಳಕೆ” ಕುರಿತು ವಕೀಲರಾದ ಎಂ.ಎ ನಿರಂಜನ್, “ಮಹಿಳಾ ಸಬಲೀಕರಣ” ಕುರಿತು ಎಸ್.ಎಂ.ರಜಿನಿ, ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರು ಕುರಿತು ಪೆÇ್ರ.ಇಟ್ಟಿರ ಬಿದ್ದಪ್ಪ, ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ ಕುರಿತು ಜಯಪ್ರಕಾಶ್ ಪುತ್ತೂರು ವಿಚಾರ ಮಂಡಿಸಲಿದ್ದಾರೆ.
ಜಿಲ್ಲೆಯಲ್ಲಿ ದತ್ತಿ ಸ್ಥಾಪಿಸಿ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತ ನೂತನ ದತ್ತಿ ಸ್ಥಾಪಿಸಿದ ಮಲ್ಲೆಂಗಡ ಮಧುಷ್ ಪೂವಯ್ಯ, ಎಸ್.ಆರ್.ಉಷಾಲತಾ, ಶಶಿಕಾಂತಿ ರಘುನಾಥ್ ನಾಯಕ್, ಹೆಚ್.ಬಿ.ಜಯಮ್ಮ, ವಿಜಯ ವಿಷ್ಣು ಭಟ್, ಡಾ.ಎಂ.ಜಿ ನಾಗರಾಜ್, ಆರ್. ನಾಗೇಂದ್ರ ಕಾಮತ್ ಮತ್ತು ವಾಣಿಶ್ರೀ ಅವರನ್ನು ಗೌರವಿಸಲಾಗುವುದು.
ತಾಲೂಕು ಮತ್ತು ಹೋಬಳಿಯ ಅಧ್ಯಕ್ಷರುಗಳಿಗೆ ಗೌರವ ಸಮರ್ಪಣೆ ಮತ್ತು ಜಿಲ್ಲೆಯಲ್ಲಿ 10ನೇ ತರಗತಿಯಲ್ಲಿ 100 ಪಡೆದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಇವರೆಲ್ಲರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿಪಿ ರಮೇಶ್ ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಂ ಎಸ್ ಕುಶಾಲಪ್ಪ ಸನ್ಮಾನಿಸಲಿದ್ದಾರೆ. ಸಂಜೆ 5:00 ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು ಹಿರಿಯ ಸಾಹಿತಿ ಬಿ.ಎ.ಷಂಶುದ್ದೀನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಡಗು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ ಸೋಮಶೇಖರ್ ಆಶಯ ನುಡಿಯಾಡಲಿದ್ದಾರೆ. 16 ಕವಿಗಳು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಬಿ ಸಿ ಸತೀಶ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ ಅನಂತಶಯನ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಜಿಲ್ಲೆಯ ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿರುತ್ತಾರೆ.
ಸಂಜೆ ಜಿಲ್ಲೆಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮಾ.5 ರಂದು ಬೆಳಿಗ್ಗೆ 10 ಗಂಟೆಗೆ ಸಾಹಿತ್ಯಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಜ್ಞಾನಕಾವೇರಿ ಸ್ನಾತಕೋತರ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಜಮೀರ್ ಅಹಮದ್ ವಹಿಸಲಿದ್ದು ನಡಿಕೇರಿಯಂಡ ಚಿಣ್ಣಪ್ಪ ಅವರ ಸಾಹಿತ್ಯದ ಕುರಿತು ಡಾ. ಕೆ.ಕೆ ಶಿವಪ್ಪ, ಭಾರತಿ ಸುತರ ಸಾಹಿತ್ಯದ ಕುರಿತು ಡಾ ಕಾವೇರಿ ಪ್ರಕಾಶ್, ಡಾ ಕೋಡಿ ಕುಶಾಲಪ್ಪ ಗೌಡ ಅವರ ಸಾಹಿತ್ಯದ ಕುರಿತು ಡಾ ಕರುಣಾಕರ ನಿಡಿಂಜಿ, ಪಂಜೆ ಮಂಗೇಶರಾಯರ ಸಾಹಿತ್ಯದ ಕುರಿತು ಕೆ.ವಿ.ಸುರೇಶ್ ವಿಚಾರ ಮಂಡಿಸಲಿದ್ದಾರೆ.
ನಂತರ ನಡೆಯುವ ಕೊಡಗು ದರ್ಶನ ಗೋಷ್ಠಿಯ ಅಧ್ಯಕ್ಷತೆಯನ್ನು ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ ರಾಜೇಂದ್ರ ಅವರ ವಹಿಸಲಿದ್ದು, ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷದ ಕುರಿತು ಕಾಡ್ಯಮಾಡ ಮನು ಸೋಮಯ್ಯ, ಬುಡಕಟ್ಟು ಗಿರಿಜನರ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಜೆ ಎ. ಶಿವು, ಕೊಡಗಿನಲ್ಲಿ ಬೆಳೆಯುತ್ತಿರುವ ಪ್ರವಾಸೋದ್ಯಮ ಕುರಿತು ಹೆಚ್.ಟಿ.ಅನಿಲ್, ಚಲನಚಿತ್ರ ಉದ್ಯಮದಲ್ಲಿ ಕೊಡಗು ಕುರಿತು ಮುಲ್ಲೆಂಗಡ ಮಧೋಷ್ ಪೂಪಯ್ಯ ವಿಚಾರ ಮಂಡಿಸಲಿದ್ದಾರೆ.
ಮಧ್ಯಾಹ್ನ ಉದ್ಯೋನ್ಮುಖ ಗಾಯಕರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ ಕಾರ್ಯಕ್ರಮವನ್ನು ಹಿರಿಯ ಗಾಯಕರಾದ ಬಿ.ಎ ಗಣೇಶ್ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರೌಢಶಾಲೆ ಗೋಣಿಕೊಪ್ಪಲ್ಲಿನ ಮುಖ್ಯೋಪಾಧ್ಯಾಯರಾದ ಕೆ.ಮಹೇಶ್ ಉಪಸ್ಥಿತರಿರುತ್ತಾರೆ.
ನಂತರ ಕವಿಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ಶ್ರೀಮತಿ ಸ್ನೇಹ ಬಸಮ್ಮ ವಹಿಸಲಿದ್ದು ಆಶಯ ನುಡಿಯನ್ನು ಶ್ರೀಮತಿ ಕೆ.ಜಿ.ರಮ್ಯಾ ನಡೆಸಲಿದ್ದಾರೆ. 16 ಕವಿಗಳು ಗೋಷ್ಟಿಯಲ್ಲಿ ಭಾಗವಹಿಸಲಿದ್ದಾರೆ.
ನಂತರ ಸಾಹಿತ್ಯ ಪರಿಷತ್ ವತಿಯಿಂದ ಬಹಿರಂಗ ಅಧಿವೇಶನ ನಡೆಯಲಿದ್ದು ಜಿಲ್ಲೆಯ ಸಮಸ್ಯೆಗಳನ್ನು ಸರಕಾರಕ್ಕೆ ನಿವೇದಿಸುವ ಠರಾವು ಮಂಡಿಸಲಿದ್ದಾರೆ.
ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಮಾತನಾಡಿ, ಜಿಲ್ಲೆಯಲ್ಲಿ ಸಾಧನೆ ಮಾಡಿದ 16 ಅರ್ಹ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಾಹಿತಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಅಡಗೂರು ವಿಶ್ವನಾಥ್ ವಹಿಸಲಿದ್ದು ಸಾಧಕರನ್ನು ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ನಡೆಸಲಿದ್ದಾರೆ.
ಸಾಹಿತ್ಯ ಕ್ಷೇತ್ರದಿಂದ ಡಾ. ಕವಿತಾ ರೈ, ಶಿಕ್ಷಣ ಕ್ಷೇತ್ರದಿಂದ ಸಿ.ಎನ್ ವಿಶ್ವನಾಥ್. ಕನ್ನಡ ಸೇವೆಗಾಗಿ ಎನ್.ಜಿ.ಕಾಮತ್, ಸಹಕಾರ ಕ್ಷೇತ್ರದಿಂದ ಚಿರಿಯಪಂಡ ಉಮೇಶ್ ಉತ್ತಪ್ಪ, ಸಮಾಜ ಸೇವೆಗಾಗಿ ಕೆ ಟಿ ಬೇಬಿ ಮ್ಯಾಥ್ಯೂ, ರಂಗಭೂಮಿ ಕ್ಷೇತ್ರದಿಂದ ಶ್ರೀನಿವಾಸ್ ನಾಯ್ಡು, ಜನಸೇವೆಗಾಗಿ ಉಂಬಯಿ, ಜನಪದ ಕ್ಷೇತ್ರದಿಂದ ಜಿ ರಮೇಶ್, ಮಾದರಿ ಶಿಕ್ಷಕ ಸಿ ಎಸ್ ಸತೀಶ್, ಸೇನೆಯಿಂದ ಹೆಚ್ಚ್. ಎನ್. ಮಹೇಶ್, ಗಾಯನ ಕ್ಷೇತ್ರದಿಂದ ಎಂ ಎಂ ಲಿಯಾಕತ್ ಆಲಿ, ನೃತ್ಯ ಕ್ಷೇತ್ರದಿಂದ ಪ್ರೇಮಾಂಜಲಿ, ಪತ್ರಿಕಾ ವಲಯದಿಂದ ಶ್ರೀಧರ ನೆಲ್ಲಿತ್ತಾಯ, ರಕ್ಷಣಾ ಕ್ಷೇತ್ರದಿಂದ ಚೊಕ್ಕಾಡಿ ಅಪ್ಪಯ್ಯ, ವೈದ್ಯಕೀಯ ಕ್ಷೇತ್ರದಿಂದ ಅಮೃತ್ ನಾಣಯ್ಯ, ಕನ್ನಡ ಚಳುವಳಿಗಾಗಿ ವೆಂಕಟೇಶ ಪೂಜಾರಿ ಇವರನ್ನು ಸನ್ಮಾನಿಸಲಾಗುವುದು.
ಅಲ್ಲದೆ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಶ್ರೀಮತಿ ರಾಣಿ ಮಾಚಯ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ಡಾ. ಎಂ ಜಿ ನಾಗರಾಜ್, ಕೃಷಿಕ ಸೋಮೆಯಂಡ ಗಣೇಶ್ ತಿಮ್ಮಯ್ಯ, ಶೌರ್ಯ ಕ್ಷೇತ್ರದಿಂದ ಕುಮಾರ ದೀಕ್ಷಿತ್ ಮತ್ತು ಕುಮಾರಿ ನಮೃತಾ, ಅಂತರಾಷ್ಟ್ರೀಯ ಹಾಕಿ ಪಟುಗಳಾದ ವಿ.ಎನ್ ರಘುನಾಥ್, ಸನ್ನುವಂಡ ಉತ್ತಪ್ಪ, ಎಸ್. ವಿ ಸುನಿಲ್ ರವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಾರೋಪ ಭಾಷಣವನ್ನು ಸಾಹಿತಿಗಳಾದ ಕಾ.ವೆಂ. ಶ್ರೀನಿವಾಸ್ ಮೂರ್ತಿ ಮಾಡಲಿದ್ದಾರೆ. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯರಾದ ಸಿ.ಎಸ್.ಅರುಣ್ ಮಾಚಯ್ಯ ವಹಿಸಲಿದ್ದು, ಉದ್ಘಾಟನೆಯನ್ನು ಹಿರಿಯ ಕಲಾವಿದರಾದ ವಿ.ಟಿ ಶ್ರೀನಿವಾಸ್ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ನವೀನ್ ಅಂಬೆಕಲ್ಲು ಉಪಸ್ಥಿತರಿದ್ದರು.








