ವಾಲ್ನೂರು : ಮಾ.5 ರಿಂದ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ವಾರ್ಷಿಕ ಉತ್ಸವ ಆರಂಭ
01/03/2023

ಮಡಿಕೇರಿ ಮಾ.1 : ಸೋಮವಾರಪೇಟೆ ತಾಲೂಕಿನ ವಾಲ್ನೂರು ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ರಾಮ ದೇವರ ವಾರ್ಷಿಕ ಉತ್ಸವವು ಮಾ.5 ರಿಂದ 7ರ ವರೆಗೆ ನಡೆಯಲಿದೆ.
ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ.
ಮಾ.5 ರಂದು ರಾತ್ರಿ 8 ಗಂಟೆಗೆ ಕದಳಿ ಕಟ್ಟುವುದು, ಮಾ.6 ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಮಾದೇಶ್ವರ ಸ್ವಾಮಿ ಪರ್ವ, ಮಧ್ಯಾಹ್ನ 3 ಗಂಟೆಗೆ ತೆಂಗಿನ ಕಾಯಿಗೆ ಗುಂಡು ಹಾರಿಸುವುದು, ಸಂಜೆ 5 ಗಂಟೆಗೆ ಮಹಾಪೂಜೆ, ಮಂಗಳಾರತಿ ಜರುಗಲಿದ್ದು, ಸಂಜೆ 6 ಗಂಟೆಗೆ ಮೆರೆಯುವ ಬಸವಣ್ಣನಿಗೆ ಪೂಜೆ ನೆರವೇರಲಿದೆ.
ಮಾ.7 ರಂದು ಮಧ್ಯಾಹ್ನ 12 ಗಂಟೆಗೆ ಸಾಮೂಜಿಕ ಭೋಜನ ಪ್ರಸಾದ ವಿತರಣೆ, ಸಂಜೆ 4.30ಕ್ಕೆ ಹೊಂಡ ಹಾಯುವುದು, ಸಂಜೆ 5 ಗಂಟೆಗೆ ಮಹಾಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸುವಂತೆ ದೇವಾಲಯದ ತಕ್ಕರು ಹಾಗೂ ಆಡಳಿತ ಮಂಡಳಿ ಮನವಿ ಮಾಡಿದೆ.
