ಮಡಿಕೇರಿ ಮಾ.8 : ಮಡಿಕೇರಿ ಬ್ರಹ್ಮಕುಮಾರಿ ಲೈಟ್ ಹೌಸ್‍ಗೆ ಉತ್ತರ ಪ್ರದೇಶದ ರಾಜಧಾನಿ ಲಕ್ನೊದಲ್ಲಿರುವ ಬ್ರಹ್ಮಕುಮಾರಿ ಶಾಖೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ರಾಧ, ರಾಜಸ್ಥಾನದ ಉದಯ್‍ಪುರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಹಾಗೂ ಡೊಂಗರ್ ಪುರ್‍ನ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಪದ್ಮ ಭೇಟಿ ನೀಡಿದ್ದಾರೆ.
ಇವರು ಮೂಲತಃ ಕರ್ನಾಟಕದವರಾಗಿದ್ದು, ಉತ್ತರ ಭಾರತದಲ್ಲಿ ಈಶ್ವರಿಯ ಸೇವೆಯಲ್ಲಿ ತಮ್ಮ ಜೀವನವನ್ನು ಸಮರ್ಪಿತಗೊಳಿಸಿ, ಅನೇಕರಿಗೆ ಆದ್ಯಾತ್ಮಿಕದ ಮಾರ್ಗದರ್ಶಕರಾಗಿದ್ದಾರೆ.
ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರಿ ಜೀ ಅವರು ಹೂ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಮಹಿಳಾ ದಿನಾಚರಣೆ ಪ್ರಯುಕ್ತ ಸ್ಫೂರ್ತಿದಾಯಕ ನುಡಿಗಳು ಕಾರ್ಯಕ್ರಮ ನಡೆಯಲಿದೆ.









